alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನ ಈ ಅಣ್ಣ-ತಂಗಿಯರ ಅನುಬಂಧ ನೋಡಿದಿರಾ…?

ಭಾರತ, ಈಗ ರಕ್ಷಾ ಬಂಧನದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಈಗಾಗ್ಲೇ ಅಣ್ಣ ತಮ್ಮಂದಿರಿಗೆ ಸಹೋದರಿಯರು ರಾಖಿ ಕಟ್ಟಿ ಶುಭಾಶಯಗಳನ್ನ ವಿನಿಮಯ ಮಾಡಿಕೊಳ್ತಿದ್ದಾರೆ. ಬೋನಿ ಕಪೂರ್ ಮನೆಯಲ್ಲಿ ಕೂಡ ಈಗ ರಕ್ಷಾ ಬಂಧನದ ಸಂಭ್ರಮ ಮೇಳೈಸಿದೆ. ಬೋನಿಕಪೂರ್ ಪುತ್ರ ಅರ್ಜುನ್ ಕಪೂರ್ ತನ್ನ ಸೋದರಿಯರ ಜೊತೆ ರಾಖಿ ಹಬ್ಬವನ್ನ ಸೆಲೆಬ್ರೇಟ್ ಮಾಡ್ತಿದ್ದಾರೆ.

ಅನ್ಷುಲಾ, ಜಾಹ್ನವಿ, ಖುಷಿ, ಸೋನಮ್, ರೇಹಾ ಮತ್ತು ಸಾನ್ಯಾ ಜೊತೆಗಿರುವ ಫೋಟೋವನ್ನು ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜಾಹ್ನವಿ, ಖುಷಿ ಮತ್ತು ಅನ್ಷುಲಾ, ಸೋನಮ್ ರ ಪ್ರತ್ಯೇಕ ಫೊಟೋಗಳು ಮತ್ತು ಎಲ್ಲರೂ ಒಂದಾಗಿರುವ ಫೊಟೋಗಳು ನೆಟ್ ಲೋಕದಲ್ಲಿ ಸಾಕಷ್ಟು ಸುದ್ದಿ ಮಾಡ್ತಿದೆ. ಈ ಮೂಲಕ ಅರ್ಜುನ್ ಕಪೂರ್ ತಮ್ಮ ಸೋದರಿಯರೊಂದಿಗಿನ ಅನುಬಂಧವನ್ನ ಜಗತ್ತಿಗೆ ಪರಿಚಯ ಮಾಡಿಸುತ್ತಿದ್ದಾರೆ.

ಶುಕ್ರವಾರವೇ ಅರ್ಜುನ್ ಕಪೂರ್ ಸೋದರಿಯರೊಂದಿಗಿರುವ ಫೋಟೋವನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾರಾಂತ್ಯದಲ್ಲಿನ ರಕ್ಷಾಬಂಧನವನ್ನು ನನ್ನ ಪಾಲಿನ ಸಂತಸ ಹೆಚ್ಚಿಸಿದೆ ಅನ್ನೋ ಸಂದೇಶವನ್ನು ಅರ್ಜುನ್ ಕಪೂರ್ ಬರೆದುಕೊಂಡಿದ್ದಾರೆ.

ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅರ್ಜುನ್ ಕಪೂರ್ ಮತ್ತು ಅವರೆಲ್ಲರು ಹಳೆಯ ದಿನಗಳನ್ನೆಲ್ಲಾ ಮರೆತು ಒಂದಾಗಿರೋದು ನಿಜಕ್ಕೂ ನನಗೆ ಖುಷಿಯ ವಿಚಾರವಾಗಿದೆ ಅಂತ ಪ್ರತಿಕ್ರಿಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...