alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ಸ್ಪಾಟ್ ನಲ್ಲೇ ನಟನ ಮೇಲೆ ಹಲ್ಲೆಗೆ ಯತ್ನ

ನಟ ಅರ್ಜುನ್ ಕಪೂರ್ ಸದ್ಯ ಸಂದೀಪ್ ಔರ್ ಪಿಂಕಿ ಫರಾರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಚಿತ್ರದ ಶೂಟಿಂಗ್ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ವೇಳೆ ಅರ್ಜುನ್ ಜೊತೆ ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎನ್ನಲಾಗ್ತಿದೆ.

ಕಮಲ್ ಕುಮಾರ್ ಹೆಸರಿನ ವ್ಯಕ್ತಿ ಅರ್ಜುನ್ ಭೇಟಿಯಾಗಬೇಕೆಂದು ವಿನಂತಿಸಿಕೊಂಡಿದ್ದಾನೆ. ವ್ಯಾನಿಟಿ ವ್ಯಾನ್ ಬಳಿ ಬಂದಿದ್ದಾನೆ. ಅರ್ಜುನ್ ಕಪೂರ್ ಗೆ ಕೈ ಕುಲುಕುವಂತೆ ವಿನಂತಿ ಮಾಡಿದ್ದಾನೆ. ಅರ್ಜುನ್ ಕೈ ನೀಡುತ್ತಿದ್ದಂತೆ ಕೈ ತಿರುಪಿದ್ದಾನೆ ಎನ್ನಲಾಗಿದೆ.

ಕಮಲ್ ಚಾಲಕನಾಗಿದ್ದು, ಅರ್ಜುನ್ ಭೇಟಿ ವೇಳೆ ಕುಡಿದು ಬಂದಿದ್ದ ಎನ್ನಲಾಗಿದೆ. ಅರ್ಜುನ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದು ಕಾರು ಚಾಲನೆ ಮಾಡ್ತಿದ್ದ ಆರೋಪದ ಮೇಲೆ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಘಟನೆ ನಂತ್ರ ವೈದ್ಯರ ಬಳಿ ಹೋದ ಅರ್ಜುನ್ ಕೈ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆದ್ರೆ ಯಾವುದೇ ಗಾಯಗಳಾಗಿಲ್ಲವೆಂದು ಮೂಲಗಳು ಹೇಳಿವೆ. ಸಂದೀಪ್ ಔರ್ ಪಿಂಕಿ ಫರಾರ್ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...