alex Certify
ಕನ್ನಡ ದುನಿಯಾ       Mobile App
       

Kannada Duniya

2 ವರ್ಷಗಳ ಕಾಲ ಸಲ್ಮಾನ್ ಸಹೋದರಿ ಜೊತೆ ಸಂಬಂಧದಲ್ಲಿದ್ದ ಈ ನಟ

ಬಾಲಿವುಡ್ ನಟ ಅರ್ಜುನ್ ಕಪೂರ್ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜೊತೆ ಸಂಬಂಧದಲ್ಲಿದ್ದ. ಈ ವಿಷ್ಯ ಬಹುತೇಕರಿಗೆ ತಿಳಿದಿಲ್ಲ. ಇಬ್ಬರೂ ಎರಡು ವರ್ಷಗಳ ಕಾಲ ಸಂಬಂಧದಲ್ಲಿದ್ರು. ಅರ್ಪಿತಾ ಪ್ರೀತಿ ವಿಚಾರದಲ್ಲಿ ಅರ್ಜುನ್ ಗಂಭೀರವಾಗಿದ್ದ.

ಅರ್ಜುನ್ ಕಪೂರ್ 18 ವರ್ಷದಲ್ಲಿರುವಾಗ್ಲೇ ಅರ್ಪಿತಾ ಪ್ರೀತಿಗೆ ಬಿದ್ದಿದ್ದ. ಆಗ ಅರ್ಜುನ್ ತೂಕ 140 ಕೆ.ಜಿ. ಯಿತ್ತು. ಸಲಾಂ-ಎ-ಇಷ್ಕ್ ಚಿತ್ರದ ನಿರ್ದೇಶಕರಿಗೆ ಅಸಿಸ್ಟೆಂಟ್ ಆಗಿ ಅರ್ಜುನ್ ಕೆಲಸ ಮಾಡ್ತಿದ್ದ. ಅರ್ಪಿತಾ ಪ್ರೀತಿ ವಿಚಾರವನ್ನು ಸಲ್ಮಾನ್ ಕುಟುಂಬಕ್ಕೆ ಹೇಳಿದಾಗ ಅವ್ರ ಪ್ರತಿಕ್ರಿಯೆ ಅಷ್ಟು ಚೆನ್ನಾಗಿರಲಿಲ್ಲವಂತೆ. ಅರ್ಪಿತಾ ತನ್ನ ಮೊದಲ ಪ್ರೀತಿ ಎಂಬುದನ್ನು ಅರ್ಜುನ್ ಒಪ್ಪಿಕೊಂಡಿದ್ದಾನೆ.

ಅರ್ಪಿತಾ ಪ್ರೀತಿ ವಿಚಾರವನ್ನು ಸಲ್ಮಾನ್ ಕುಟುಂಬದ ಮುಂದೆ ಹೇಳಲು ಅರ್ಜುನ್ ಹೆದರಿದ್ದನಂತೆ. ಧೈರ್ಯ ಮಾಡಿ ಈ ವಿಷ್ಯ ತಿಳಿಸಿಯೂ ಆಗಿತ್ತಂತೆ. ಆದ್ರೆ ಸಲ್ಮಾನ್ ಕುಟುಂಬದವರು ಕಣ್ಣು ಕೆಂಪು ಮಾಡಿದ್ದರಂತೆ. ಈ ಮಧ್ಯೆ ಅರ್ಪಿತಾ, ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಳಂತೆ. ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಅರ್ಪಿತಾ, ಆಯುಶ್ ಶರ್ಮಾ ಕೈ ಹಿಡಿದಿದ್ದಾಳೆ. ಆಯುಶ್ ಶೀಘ್ರವೇ ಲವ್ ರಾತ್ರಿ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...