alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ ನಲ್ಲಿ ಪ್ರಭಾಸ್ – ಅನುಷ್ಕಾ ನಿಶ್ಚಿತಾರ್ಥ..?

ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಅಭಿಮಾನಿಗಳ ಫೇವರಿಟ್. ರಿಯಲ್ ಲೈಫಲ್ಲೂ ಇವರಿಬ್ರೂ ಜೊತೆಯಾಗಬೇಕು ಅನ್ನೋದು ಎಲ್ಲರ ಆಸೆ. ಅದಕ್ಕೆ ಪುಷ್ಠಿ ಕೊಡುವಂತೆ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಸಿಪ್ ಕೂಡ ಇದೆ.

ಅಷ್ಟೇ ಯಾಕೆ ಬಾಹುಬಲಿಯ ಈ ಜನಪ್ರಿಯ ಜೋಡಿ, ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ. ಈ ಬಗ್ಗೆ ಅನುಷ್ಕಾ ಶೆಟ್ಟಿ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಆದ್ರೆ ಪ್ರಭಾಸ್ ರಿಯಾಕ್ಟ್ ಮಾಡಿದ್ದಾರೆ. ಹಿಟ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದಾಗ ಇಂತಹ ಗಾಸಿಪ್ ಸಹಜ ಎಂದಿದ್ದಾರೆ.

ನಾವಿಬ್ರೂ 9 ವರ್ಷಗಳಿಂದ ಒಳ್ಳೆ ಸ್ನೇಹಿತರು, ಒಟ್ಟಾಗಿ ನಟಿಸಿದ್ದೇನೆ. ಪರಸ್ಪರರನ್ನು ಅರ್ಥ ಮಾಡಿಕೊಂಡಿದ್ದೇವೆ. ಆದ್ರೆ ನಮ್ಮಿಬ್ಬರ ಮಧ್ಯೆ ಲವ್, ಅಫೇರ್ ಅಂಥದ್ದೇನೂ ಇಲ್ಲ ಎಂದಿದ್ದಾರೆ ಪ್ರಭಾಸ್. ಅಷ್ಟೇ ಅಲ್ಲ ಸದ್ಯಕ್ಕೆ ಮಿಂಗಲ್ ಆಗ್ತಿಲ್ಲ, ಸಿಂಗಲ್ ಆಗಿರೋದೇ ನನಗಿಷ್ಟ ಅಂತಾ ಹೇಳಿದ್ದಾರೆ.

ಆದ್ರೆ ಪ್ರಭಾಸ್ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಅದೂ ಅಲ್ದೆ ಇನ್ನೆಷ್ಟು ದಿನ ಬಾಹುಬಲಿ ಒಬ್ಬಂಟಿಯಾಗಿರ್ತಾರೆ ಅನ್ನೋದು ಅಭಿಮಾನಿಗಳ ಪ್ರಶ್ನೆ. ಈ ಬಗ್ಗೆ ಅನುಷ್ಕಾ ಶೆಟ್ಟಿ ರಿಯಾಕ್ಷನ್ ಏನು ಅನ್ನೋ ಕುತೂಹಲವೂ ಎಲ್ಲರಲ್ಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...