alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟ, ನಟಿ ನಡುವೆ ಸಂಥಿಂಗ್, ಸಂಥಿಂಗ್

naga

ಹೈದರಾಬಾದ್: ಟಾಲಿವುಡ್ ಸಿನಿಮಾರಂಗದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ಸಿನಿಮಾ ವಲಯದಲ್ಲಿ ಮಾತ್ರವಲ್ಲದೇ, ಅಭಿಮಾನಿಗಳಲ್ಲೂ ಭಾರೀ ಚರ್ಚೆಯ ವಿಷಯವಾಗಿದೆ. ಎಲ್ಲೆಲ್ಲೂ ಟಾಕ್ ಆಫ್ ದ ಟೌನ್ ಆಗಿರುವ ಈ ವಿಷಯದ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ಹಾಗೂ ನಟರಾಗಿರುವ ನಾಗಚೈತನ್ಯ ಹಾಗೂ ‘ಈಗ’ ಖ್ಯಾತಿಯ ನಟಿ ಸಮಂತಾ ಲಿವಿಂಗ್ ಟುಗೆದರ್ ನಲ್ಲಿದ್ದಾರೆ. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹೆಚ್ಚಾಗಿ ಹರಿದಾಡಿತ್ತು. ಸಮಂತಾ ಮನೆಗೆ ಭೇಟಿ ನೀಡಿದ್ದ ನಾಗಚೈತನ್ಯ ಅವರ ತಾಯಿ ಮದುವೆ ಬಗ್ಗೆಯೇ ಮಾತುಕತೆ ನಡೆಸಿರಬಹುದೆಂದು ಹೇಳಲಾಗಿತ್ತು. ಇಷ್ಟೆಲ್ಲಾ ಬೆಳವಣಿಗೆಗಳ ನಂತರ, ನಾಗಚೈತನ್ಯ ಮನೆಯಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.

ಸಮಂತಾ ಹೆಚ್ಚಾಗಿ ನಾಗಚೈತನ್ಯ ಮನೆಯಲ್ಲಿಯೇ ಕಾಲಕಳೆಯುತ್ತಿದ್ದು, ಇವರಿಬ್ಬರೂ ಜೊತೆಯಾಗಿರುವ ಫೋಟೋಗಳು ಹರಿದಾಡುತ್ತಿವೆ ಎನ್ನಲಾಗಿದೆ. ಆದರೆ, ಇಬ್ಬರೂ ತಾವು ಪ್ರೀತಿಸುತ್ತಿರುವ ಬಗ್ಗೆಯಾಗಲಿ, ಲಿವಿಂಗ್ ಟುಗೆದರ್ ನಲ್ಲಿರುವ ಬಗ್ಗೆಯಾಗಲಿ ಎಲ್ಲಿಯೂ ಬಾಯಿಬಿಟ್ಟಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...