alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಬಂಟಿ ಜೊತೆ ಸೋನಾಕ್ಷಿ ನಿಶ್ಚಿತಾರ್ಥ..?

%e0%b2%ac%e0%b3%81%e0%b2%a8%e0%b2%a4%e0%b2%af

ಬಂಟಿ ಸಜ್ದೆ ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಜೊತೆ ನಂಟು ಹೊಂದಿದ್ದಾರೆ. ಆದ್ರೆ ಇತ್ತೀಚೆಗೆ ನಟಿ ಸೋನಾಕ್ಷಿ ಸಿನ್ಹಾ ಜೊತೆ ಬಂಟಿ ಸಖತ್ ಕ್ಲೋಸಾಗಿದ್ದಾರೆ ಅನ್ನೋ ಸುದ್ದಿಯಿತ್ತು. ಬಂಟಿ ಹಾಗೂ ಸೋನಾ ಪ್ರೇಮ್ ಕಹಾನಿಗೆ ಸದ್ಯದಲ್ಲೇ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗ್ತಾ ಇದೆ.

ಬಂಟಿ, ಸೋನಾಕ್ಷಿ ಬೆರಳಿಗೆ ನಿಶ್ಚಿತಾರ್ಥದ ಉಂಗುರ ತೊಡಿಸುವ ದಿನಗಳು ಕೂಡ ದೂರವಿಲ್ಲವಂತೆ. ಅಸಲಿಗೆ ಬಂಟಿ, ಸಲ್ಮಾನ್ ಸಹೋದರ ಸೊಹೈಲ್ ಖಾನ್ ಪತ್ನಿ ಸೀಮಾಳ ಸಹೋದರ. ಹಾಗಾಗಿ ಸಲ್ಲು ಫ್ಯಾಮಿಲಿ ಜೊತೆಗೂ ಸೋನಾಕ್ಷಿ ಆತ್ಮೀಯತೆ ಹೊಂದಿದ್ದಾಳೆ.

ಬಂಟಿ ಹಾಗೂ ಸೋನಾಕ್ಷಿ ಇಬ್ಬರ ಕುಟುಂಬದವರೂ ಪರಸ್ಪರ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಎಂಗೇಜ್ಮೆಂಟ್ ಮಾಡಲು ಸಿದ್ಧತೆ ಶುರು ಮಾಡಿದ್ದಾರಂತೆ. 2012ರಲ್ಲಿ ಬಂಟಿ ಹಾಗೂ ಸೋನಾಕ್ಷಿ ಜೊತೆಯಾಗಿ ಕೆಲಸ ಮಾಡಿದ್ರು. ಕಳೆದ ಕೆಲವು ತಿಂಗಳುಗಳಿಂದ ಹಲವು ಬಾರಿ ಜೋಡಿಯಾಗಿ ಪಾರ್ಟಿ, ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...