alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಬಾಂಬ್ ಸಿಡಿಸಿದ ಅರ್ಬಾಜ್ ಖಾನ್..!

arbaaz-khan-story-fb_647_032816072053

ನಟಿ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಬೇರೆ ಬೇರೆಯಾಗಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆಗಾಗ ಫ್ಯಾಮಿಲಿ ಪಾರ್ಟಿ ಫಂಕ್ಷನ್ ಗಳಲ್ಲಿ ಮಲೈಕಾ ಕಾಣಿಸಿಕೊಳ್ತಾ ಇರೋದನ್ನು ನೋಡಿ ಮತ್ತೆ ಇಬ್ಬರೂ ಒಂದಾಗಬಹುದು ಅನ್ನೋ ನಿರೀಕ್ಷೆಯೂ ಇತ್ತು. ಆದ್ರೆ ಖುದ್ದು ಅರ್ಬಾಜ್ ಖಾನ್ ಅಭಿಮಾನಿಗಳಿಗೆಲ್ಲ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.

ಅರ್ಬಾಜ್ ಸದ್ಯ ಯುವತಿಯೊಬ್ಬಳ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ. ಆಕೆ ರೆಸ್ಟೋರೆಂಟ್ ಒಂದರ ಮಾಲಕಿ, ಗೋವಾದಲ್ಲಿ ಅರ್ಬಾಜ್ ಹಾಗೂ ಆಕೆಯ ಭೇಟಿಯಾಗಿತ್ತಂತೆ. 2016ರ ಮಾರ್ಚ್ ನಲ್ಲಿ ಅರ್ಬಾಜ್ ಹಾಗೂ ಮಲೈಕಾ ಬೇರೆಯಾಗಲು ನಿರ್ಧರಿಸಿದ್ರು. ಆದ್ರೆ ಎರಡು ವರ್ಷಗಳ ಹಿಂದೆಯೇ ಅರ್ಬಾಜ್ ಗೆ ಆ ಯುವತಿ ಜೊತೆಗೆ ಲವ್ವಾಗಿದೆಯಂತೆ.

ಮಲೈಕಾ ಜೊತೆಗೆ ತುಂಬಾ ವರ್ಷಗಳ ಸ್ನೇಹವಿರೋದ್ರಿಂದ ದಾಂಪತ್ಯ ಮುರಿದು ಬಿದ್ದ ಮೇಲೂ ಇಬ್ಬರೂ ಆಗಾಗ ಜೊತೆಯಲ್ಲಿ ಕಾಣಿಸಿಕೊಳ್ತಾರೆ. ಮಗನಿಗೋಸ್ಕರ ಆಗಾಗ ಅರ್ಬಾಜ್ ಕುಟುಂಬದ ಪಾರ್ಟಿ, ಫಂಕ್ಷನ್ ಗಳಿಗೆ ಮಲೈಕಾ ಕೂಡ ಬರ್ತಾರಂತೆ. ಪತಿ-ಪತ್ನಿಯಾಗಿ ಇಬ್ಬರೂ ಬೇರೆಯಾಗಿದ್ರೂ ಮಲೈಕಾ ಕುಟುಂಬದವರು ತಮ್ಮೊಂದಿಗೆ ಆತ್ಮೀಯವಾಗಿದ್ದಾರೆ ಅಂತಾ ಅರ್ಬಾಜ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...