alex Certify
ಕನ್ನಡ ದುನಿಯಾ       Mobile App
       

Kannada Duniya

‘2.O’ ಆಡಿಯೋ ರಿಲೀಸ್ ಗೆ ರೆಹಮಾನ್ ಲೈವ್ ಶೋ

ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘2.O’ ಆಡಿಯೋ ಬಿಡುಗಡೆಯ ಅದ್ಧೂರಿ ಸಮಾರಂಭ ದುಬೈನಲ್ಲಿ ನಡೆಯಲಿದೆ.

ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸಿರುವ ‘2.O’ ಪ್ರಚಾರ ಕಾರ್ಯ ಹಿಂದೆಯೇ ಆರಂಭವಾಗಿದೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರದ ಪ್ರಚಾರಕ್ಕಾಗಿಯೇ 40 ಕೋಟಿ ರೂ. ಮೀಸಲಿಡಲಾಗಿದೆ.

ಭಾರತದ ಬಹುನಿರೀಕ್ಷೆಯ ಚಿತ್ರವಾಗಿರುವ ‘2.O’ ಆಡಿಯೋ ಬಿಡುಗಡೆ ಸಮಾರಂಭ ಅಕ್ಟೋಬರ್ 27 ರಂದು ದುಬೈನಲ್ಲಿ ನಡೆಯಲಿದ್ದು, ಭಾರತೀಯ ಸಿನಿಮಾ ಜಗತ್ತಿನ ದಿಗ್ಗಜರು, ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.

ಈ ಇವೆಂಟ್ ಅನ್ನು ಹಬ್ಬದ ರೀತಿ ಆಚರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಲೈವ್ ಶೋ ನೀಡಲಿದ್ದಾರೆ. ಇದು ಜಗತ್ತಿನ ಬಿಗ್ ಸಿನಿಮಾ ಶೋ ಆಗುವ ನಿರೀಕ್ಷೆ ಇದೆ.

ರಜನಿಕಾಂತ್. ಆಮಿ ಜಾಕ್ಸನ್, ಅಕ್ಷಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರ 2018 ರ ಜನವರಿ 25 ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...