alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದರಂತೆ ಎ.ಆರ್.ರೆಹಮಾನ್

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಎಂದರೆ ಯಾರಿಗೆ ಗೊತ್ತಿಲ್ಲ…? ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಅವರ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿರದ ಒಂದು ವಿಷಯ ಏನೆಂದರೆ ಆತ್ಮಹತ್ಯೆ. ಹೌದು….ಎ.ಆರ್. ರೆಹಮಾನ್ ಅತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರಂತೆ. ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಶನಿವಾರ ಚೆನ್ನೈನಲ್ಲಿ ಎ.ಆರ್. ರೆಹಮಾನ್ ಅವರ ಜೀವನಚರಿತ್ರೆ “ದ ನೋಟ್ ಆಫ್ ಡ್ರೀಮ್” ಬಿಡುಗಡೆ ಸಂದರ್ಭದಲ್ಲಿ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದರು. ನನ್ನ ತಂದೆ ಆರ್.ಕೆ. ಶೇಖರ್(ಅವರೂ ಚಿತ್ರಗೀತೆ ಸಂಯೋಜಕರಾಗಿದ್ದರು) ನನಗೆ 9 ವರ್ಷಗಳಿದ್ದಾಗಲೇ ತೀರಿಹೋಗಿದ್ದರು.

ತಂದೆಯವರ ನಿಧನದ ಕಾರಣದಿಂದ ನಾನು ತುಂಬಾ ನೊಂದಿದ್ದೆ. ಆ ಬಳಿಕ ನನ್ನ 12 ರಿಂದ 22ನೇ ವಯಸ್ಸಿನಲ್ಲಿ ಸಂಗೀತ ಸೇರಿ ಅನೇಕ ವಿಷಯಗಳನ್ನು ಕಲಿತರೂ ನನಗೆ ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲು ಆಗಿರಲಿಲ್ಲ. ಹೆಚ್ಚೂಕಡಿಮೆ ನನ್ನ 25ನೇ ವಯಸ್ಸಿನವರೆಗೂ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಗಳು ಬರುತ್ತಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಅವರಿಗೆ ದಿಲೀಪ್‍ ಕುಮಾರ್ ಎಂದರೇ ಆಗುತ್ತಿರಲಿಲ್ಲವಂತೆ. ಅಂದರೆ ಅವರ ಅಸಲಿ ಹೆಸರು ದಿಲೀಪ್‍ ಕುಮಾರ್ ಬಗ್ಗೆಯೇ ಅವರಿಗೆ ವಿನಾಕಾರಣ ಒಂದು ಬೇಸರವಿತ್ತಂತೆ. ಹಳೆದೆಲ್ಲ ಮರೆತು ಹೊಸ ಬದುಕು ಶುರುವಾಗಲಿ ಎಂದು ಎ.ಆರ್. ರೆಹಮಾನ್ ಎಂದು ಹೆಸರು ಬದಲಿಸಿಕೊಂಡೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...