alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೇರಳ….ಕೇರಳ….ಡೋಂಟ್ ವರಿ ಕೇರಳಾ….’ ಬದಲಾಯ್ತು ಹಾಡಿನ ಸಾಹಿತ್ಯ

ಜಲಪ್ರಳಯದಿಂದ ಕಂಗಾಲಾಗಿರುವ ಕೇರಳಕ್ಕೆ ವಿವಿಧ ಕಡೆಗಳಿಂದ ನೆರವು ಹರಿದುಬರುತ್ತಿದೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೇರಳ ಜನರ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಕೇರಳದ ಪರಿಸ್ಥಿತಿಯನ್ನು ಹೊರ ಜಗತ್ತಿಗೆ ತಿಳಿಸಲು ಒಂದು ಪ್ರಮುಖ ಹಾಡಿನ ಸಾಹಿತ್ಯವನ್ನು ಬದಲಿಸಿ ಹಾಡಿದ್ದಾರೆ.

ಕಾದಲ್ ದೇಸಮ್ ಚಿತ್ರದ ಮುಸ್ತಫಾ ಮುಸ್ತಫಾ ಹಾಡನ್ನು ಕೇರಳ, ಕೇರಳ ಡೋಂಟ್ ವರಿ ಕೇರಳಾ ಎಂದು ಕಾನ್ಸರ್ಟ್ ನಲ್ಲಿ ಹಾಡಿರುವ ರೆಹಮಾನ್ ಗಮನ ಸೆಳೆದಿದ್ದಾರೆ. ಆಗಸ್ಟ್ 19ರಂದು ಕ್ಯಾಲಿಫೋರ್ನಿಯಾದ ಅನಾಹೈಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರೀತಿ ಸಾಹಿತ್ಯ ಬದಲಿಸಿ ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ಇದ್ದ ಕೇರಳ ಮೂಲದವರನ್ನು ಸೆಳೆಯುವ ಜತೆಗೆ ಕೇರಳದ ಬಗ್ಗೆ ತಮ್ಮ ಭಾವನೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿದರು.

ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರನ್ನು ಮುಟ್ಟಿದೆ. ಪ್ರತಿಭಾನ್ವಿತ ಕಲಾವಿದರಿದ್ದ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ಕೇರಳ ಕೇರಳಾ ಸಾಹಿತ್ಯ ಪ್ರೇಕ್ಷಕರನ್ನು ಸೆಳೆಯಿತಲ್ಲದೇ, ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...