alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಶೆಟ್ಟಿ ಮೇಲೂ ನಡೆಯಲಿಲ್ಲ ಕರಣ್ ಜಾದು

ಬಾಹುಬಲಿಯನ್ನು ಹಿಂದಿ ಪ್ರೇಕ್ಷಕರ ಮುಂದಿಟ್ಟವರು ಕರಣ್ ಜೋಹರ್. ಬಾಹುಬಲಿ ಚಿತ್ರದ ನಂತ್ರ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಹಿಂದಿ ಪ್ರೇಕ್ಷಕರ ಫೇವರೆಟ್ ಆಗಿದ್ದಾರೆ. ಇದೇ ಕಾರಣಕ್ಕೆ ಪ್ರಭಾಸ್ ಹಾಗೂ ಅನುಷ್ಕಾರನ್ನು ಬಾಲಿವುಡ್ ಗೆ ಪರಿಚಯಿಸುವ ಪ್ರಯತ್ನ ಮಾಡಿದ್ದರು ಕರಣ್. ಆದ್ರೆ ಕರಣ್ ಪ್ರಯತ್ನ ಫಲ ನೀಡಿಲ್ಲ. ಅನುಷ್ಕಾ ಶೆಟ್ಟಿ ಕೂಡ ಕರಣ್ ಚಿತ್ರವನ್ನು ತಿರಸ್ಕರಿಸಿದ್ದಾಳೆ.

ಕರಣ್ ಚಿತ್ರವನ್ನು ಅನುಷ್ಕಾ ತಿರಸ್ಕರಿಸಲು ಪ್ರಭಾಸ್ ಕಾರಣ ಎನ್ನಲಾಗ್ತಿದೆ. ಈ ಹಿಂದೆ ಪ್ರಭಾಸ್ ಹಾಗೂ ಕರಣ್ ಮಧ್ಯೆ ಮಾತುಕತೆ ನಡೆದಿತ್ತು. ಪ್ರಭಾಸ್, ಬಾಲಿವುಡ್ ಚಿತ್ರದಲ್ಲಿ ನಟಿಸಲು 20 ಕೋಟಿ ಕೇಳಿದ್ದರು. ಸಂಭಾವನೆ ಕೇಳಿ ದಂಗಾಗಿದ್ದ ಕರಣ್ ಸಹವಾಸ ಬೇಡ ಅಂತಾ ಪ್ರಭಾಸ್ ರಿಂದ ದೂರವಿದ್ದಾರೆ. ಪ್ರಭಾಸ್ ಪ್ರಭಾವಕ್ಕೆ ಒಳಗಾಗಿ ಅನುಷ್ಕಾ ಚಿತ್ರ ತಿರಸ್ಕರಿಸಿದ್ದಾರೆ ಎನ್ನಲಾಗ್ತಿದೆ.

ಚಿತ್ರದ ಪಾತ್ರ ಇಷ್ಟವಾಗ್ಲಿಲ್ವಂತೆ. ಹಾಗಾಗಿ ಅನುಷ್ಕಾ, ಕರಣ್ ಚಿತ್ರಕ್ಕೆ ಎಸ್ ಎನ್ನಲಿಲ್ಲ ಎಂಬ ಮಾತೂ ಇದೆ. ಈ ಹಿಂದೆ ಕೂಡ ಬಾಲಿವುಡ್ ನಿಂದ ಅನೇಕ ಆಫರ್ ಅನುಷ್ಕಾಗೆ ಹೋಗಿತ್ತು. ಆದ್ರೆ ಈವರೆಗೂ ಅನುಷ್ಕಾ ಬಾಲಿವುಡ್ ಗೆ ಬರುವ ಮನಸ್ಸು ಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...