alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಕುರಿತು ಮನಬಿಚ್ಚಿ ಮಾತನಾಡಿದ ಅನುಷ್ಕಾ

‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರಿಗೆ ಪದೇ, ಪದೇ ಎದುರಾಗುವ ಪ್ರಶ್ನೆ ಎಂದರೆ, ಮದುವೆ ಯಾವಾಗ? ಇಂತಹ ಪ್ರಶ್ನೆ ಎದುರಾದಾಗಲೆಲ್ಲಾ ಅದಕ್ಕಿನ್ನು ಟೈಮಿದೆ ಎಂದಷ್ಟೇ ಅವರು ಹೇಳುತ್ತಿದ್ದರು.

‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಮತ್ತು ಅನುಷ್ಕಾ ಅವರ ಮದುವೆ ವಿಷಯ ಚರ್ಚೆಯಾದಷ್ಟು ಬೇರೆ ಯಾವ ಜೋಡಿಗಳ ಮದುವೆ ವಿಚಾರ ಚರ್ಚೆಯಾಗಿಲ್ಲ. ಈಗ ಅನುಷ್ಕಾ ಅವರು ತಮ್ಮ ಮದುವೆ ಕನಸು ರಿವೀಲ್ ಮಾಡಿದ್ದಾರೆ.

ಅನುಷ್ಕಾ ಹಿಂದೆಯೇ ಮದುವೆಯಾಗಬೇಕಿತ್ತಾದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಈ ಕುರಿತು ಪ್ರಶ್ನೆ ಎದುರಾದಾಗಲೂ ಅವರು ಮನಬಿಚ್ಚಿ ಮಾತನಾಡಿರಲಿಲ್ಲ.

ಈಗ ತಮ್ಮ ಮನದಾಳದ ಇಂಗಿತ ಹೊರಹಾಕಿರುವ ಅನುಷ್ಕಾ, ಒಂದೊಳ್ಳೆ ಸಮಯದಲ್ಲಿ ಮದುವೆಯಾಗಿ ಮಕ್ಕಳನ್ನು ಪಡೆಯುತ್ತೇನೆ. ಪಾಲಕರು ಹಿಂದೆಯೇ ಮದುವೆಯಾಗಲು ಹೇಳಿದ್ದರು. ಆದರೆ, ಒತ್ತಡ ಹಾಕಿಲ್ಲ. ಕಾಲಕೂಡಿ ಬಂದಾಗ ನಾನು ಮದುವೆಯಾಗುತ್ತೇನೆ ಎಂದು ತಿಳಿಸಿದ್ದಾರೆ.

ಅನುಷ್ಕಾ ಬಾಳ ಸಂಗಾತಿಯ ಹುಡುಕಾಟದಲ್ಲಿದ್ದಾರೆ. ಅವರಿಗೆ ಪ್ರಭಾಸ್ ಜೋಡಿಯಾಗಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ. ‘ಭಾಗಮತಿ’ ಭರ್ಜರಿ ಯಶಸ್ಸು ಕಂಡಿದ್ದು, ಗಳಿಕೆಯಲ್ಲಿಯೂ ಮುಂದಿದೆ. ಸಿನಿಮಾಗಳಿಂದ 2 ತಿಂಗಳು ರೆಸ್ಟ್ ಮಾಡಿರುವ ಅನುಷ್ಕಾ, ಕಿರುತೆರೆಯ ಪ್ರೋಗ್ರಾಂ ಒಂದರಲ್ಲಿ ಕಾಣಿಸಿಕೊಳ್ತಿದ್ದು, ಪೆಟ್ರೋಲ್ ಬಂಕ್ ನಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...