alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಶೆಟ್ಟಿ ನಿದ್ದೆಗೆಡಿಸಿದೆ ತೂಕ

download-1

ಬಾಹುಬಲಿಯ ಸೂಪರ್ ಜೋಡಿ ಪ್ರಭಾಸ್ ಹಾಗೂ ಅನುಷ್ಕಾಶೆಟ್ಟಿ ಅಭಿಮಾನಿಗಳಿಗೊಂದು ಬೇಸರದ ಸುದ್ದಿಯಿದೆ. ಬಾಹುಬಲಿ ಹಾಗೂ ಬಾಹುಬಲಿ-2 ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಸಾಹೋ ಚಿತ್ರದಲ್ಲಿ ಒಟ್ಟಿಗೆ ನಟಿಸ್ತಾಯಿಲ್ಲ.

ಮೂಲಗಳ ಪ್ರಕಾರ ಬಾಹುಬಲಿ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ತಮ್ಮ ತೂಕ ಹೆಚ್ಚಿಸಿಕೊಂಡಿದ್ದರು. ಆದ್ರೀಗ ಅವರ ತೂಕವೇ ವಿವಾದಕ್ಕೆ ಕಾರಣವಾಗಿದೆ. ಸಾಹೋ ಚಿತ್ರದಲ್ಲಿ ಬಾಹುಬಲಿ ಲುಕ್ ಬಿಟ್ಟು ಸ್ವಲ್ಪ ಬೋಲ್ಡ್ ಲುಕ್ ನಲ್ಲಿ ಅನುಷ್ಕಾ ಕಾಣಿಸಿಕೊಳ್ಳಬೇಕಾಗಿದೆ.

ಅನುಷ್ಕಾ ತೂಕ ಏರಿರುವುದರಿಂದ ಸಾಹೋ ಚಿತ್ರ ಅವರ ಕೈತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಪಾತ್ರಕ್ಕಾಗಿ ಅನುಷ್ಕಾ ವರ್ಕ್ ಔಟ್ ಮಾಡ್ತಿದ್ದಾಳೆ. ಆದ್ರೂ ಅಗತ್ಯಕ್ಕಿಂತ 6-8 ಕೆ.ಜಿ. ತೂಕ ಹೆಚ್ಚಿದೆಯಂತೆ. ಚಿತ್ರಕ್ಕಾಗಿ ಅನುಷ್ಕಾ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾಳೆ. ಹಾಗಾಗಿಯೇ SIIMA 2017 ನ್ನು ಮಿಸ್ ಮಾಡಿಕೊಂಡಿದ್ದಾಳೆ. ಆದ್ರೀಗ ತೂಕ ಹೆಚ್ಚಿರುವ ಕಾರಣ ಅನುಷ್ಕಾ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ ಎನ್ನಲಾಗ್ತಾ ಇದೆ.

ಸಾಹೋ ಚಿತ್ರವನ್ನು ಸುಜಿತ್ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಟೀಜರ್ ರಿಲೀಸ್ ಆಗಿದೆ. ಚಿತ್ರ ಬಿಡುಗಡೆಯ ದಿನಾಂಕ ಹೊರಬಂದಿಲ್ಲ. 2018ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...