alex Certify
ಕನ್ನಡ ದುನಿಯಾ       Mobile App
       

Kannada Duniya

‘ಹೀರೋ’ ಕೊಹ್ಲಿ ಬಿಟ್ಟು ‘ಝೀರೋ’ ಬಳಿ ಬಂದ್ಲು ಅನುಷ್ಕಾ

ಸದ್ಯ ಸುದ್ದಿಯಲ್ಲಿರುವ ನವ ವಧು ಅನುಷ್ಕಾ ಶರ್ಮಾ ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದಾಗಿದೆ. ಪತಿ ವಿರಾಟ್ ರನ್ನು ಬಿಟ್ಟು ಭಾರತಕ್ಕೆ ವಾಪಸ್ ಬಂದಿರುವ ಅನುಷ್ಕಾ ಕೆಲಸಕ್ಕೆ ಮರಳಿದ್ದಾಳೆ. ಈ ವಿಷ್ಯವನ್ನು ಅನುಷ್ಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ.

ಕ್ರಿಕೆಟ್ ಹೀರೋ ವಿರಾಟ್ ಕೊಹ್ಲಿ ಜೊತೆ ಮದುವೆ, ಹನಿಮೂನ್, ಹೊಸ ವರ್ಷದ ಸ್ವಾಗತ ಇವೆಲ್ಲವನ್ನೂ ಮುಗಿಸಿ ಅನುಷ್ಕಾ ಝೀರೋ ಚಿತ್ರದ ಸೆಟ್ ಗೆ ಬಂದಿದ್ದಾಳೆ. ತಿಂಗಳ ನಂತ್ರ ಸೆಟ್ ಗೆ ವಾಪಸ್ ಬಂದ ಅನುಷ್ಕಾಳಿಗೆ ಚಿತ್ರತಂಡ ಹೂಗುಚ್ಛ ನೀಡಿ ಸ್ವಾಗತ ಕೋರಿದೆ. ವ್ಯಾನಿಟಿ ವ್ಯಾನನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಆನಂದ್ ಎಲ್ ರಾಯ್ ಚಿತ್ರದಲ್ಲಿ ಅನುಷ್ಕಾ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆ ನಟಿಸಲಿದ್ದಾಳೆ. ಇತ್ತೀಚಿಗಷ್ಟೇ ಶಾರುಖ್ ಖಾನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಝೀರೋ ನಂತ್ರ ಅನುಷ್ಕಾ ವರುಣ್ ಧವನ್ ಜೊತೆ ಸುಯಿ ಥಾಗಾದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇನ್ನು ಫೆಬ್ರವರಿ 9ರಂದು ಪರಿ ತೆರೆಗೆ ಬರ್ತಿದ್ದು ಅದ್ರ ಪ್ರಚಾರವನ್ನೂ ಅನುಷ್ಕಾ ಮಾಡಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...