alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ನಗು ಕ್ಯಾಮರಾ ಕಡೆಗಿದ್ರೆ, ಕೊಹ್ಲಿ ನೋಟ ಪ್ರೇಯಸಿಯತ್ತ….

‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಸೋಲಿನಿಂದ ಬೇಸರಗೊಂಡಿದ್ದ ನಟಿ ಅನುಷ್ಕಾ ಶರ್ಮಾ, ಗೆಳೆಯ ವಿರಾಟ್ ಕೊಹ್ಲಿ ಜೊತೆಗೆ ಶ್ರೀಲಂಕಾದಲ್ಲಿ ಸುತ್ತಾಡಿ ರಿಲ್ಯಾಕ್ಸ್ ಆಗಿದ್ದಾರೆ. ಇದೀಗ ಮತ್ತೆ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಸಜ್ಜಾಗುತ್ತಿದ್ದಾರೆ.

ವಿಶೇಷ ಅಂದ್ರೆ ರಿಯಲ್ ಜೋಡಿ ಈಗ ಪರದೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜಾಹೀರಾತೊಂದರಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಜಾಹೀರಾತು ಚಿತ್ರೀಕರಣದ ಕೆಲವು ಫೋಟೋಗಳು ವೈರಲ್ ಆಗಿವೆ.

ಇಬ್ಬರೂ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸ್ತಿದ್ದಾರೆ. ಅನುಷ್ಕಾ ಕ್ಯಾಮರಾ ಕಡೆಗೆ ನೋಡ್ತಿದ್ರೆ, ಕೊಹ್ಲಿಯ ಕಣ್ಣು ಪ್ರೇಯಸಿಯನ್ನು ಬಿಟ್ಟು ಅತ್ತಿತ್ತ ಹೊರಳುತ್ತಿರಲಿಲ್ಲ. ಅನುಷ್ಕಾಳ ಸೌಂದರ್ಯ ನೋಡಿ ಬೆರಗಾಗಿದ್ದ ವಿರಾಟ್, ಕಳೆದು ಹೋಗಿದ್ರು.

ಅನುಷ್ಕಾಳ ಮುಗುಳು ನಗೆ, ಪ್ರಿಯತಮೆ ಕಡೆಗೆ ಕೊಹ್ಲಿಯ ನೆಟ್ಟ ನೋಟ, ಈ ಫೋಟೋ ಅಂತೂ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಮುಂಬೈನಲ್ಲಿ ಈ ಜಾಹೀರಾತಿನ ಶೂಟಿಂಗ್ ನಡೆದಿದೆ. ಅದ್ಯಾವಾಗ ಜಾಹೀರಾತು ಟಿವಿಯಲ್ಲಿ ಬರುತ್ತೋ ಅಂತಾ ಅಭಿಮಾನಿಗಳು ಕೂಡ ಕಾತರದಿಂದಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...