alex Certify
ಕನ್ನಡ ದುನಿಯಾ       Mobile App
       

Kannada Duniya

ಮಧುಚಂದ್ರಕ್ಕೆ ಹೊರಟ್ರು ಅನುಷ್ಕಾ-ಕೊಹ್ಲಿ

ನವ ದಂಪತಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹನಿಮೂನ್ ಮೂಡ್ ನಲ್ಲಿದ್ದಾರೆ. ನವಜೋಡಿ ಹನಿಮೂನ್ ಗಾಗಿ ರೋಮ್ ಗೆ ಪ್ರಯಾಣ ಬೆಳೆಸಿದ್ದಾರೆ. ಮುಂಬೈ ಮಿರರ್ ವರದಿ ಪ್ರಕಾರ ಕೊಹ್ಲಿ-ಅನುಷ್ಕಾ ಒಂದು ವಾರಗಳ ಕಾಲ ರೋಮ್ ಸುತ್ತಲಿದ್ದಾರೆ ಎನ್ನಲಾಗ್ತಿದೆ.

ವಿರಾಟ್-ಅನುಷ್ಕಾ ರೋಮ್ ಗೆ ಹೋದ್ರೆ ಅವ್ರ ಕುಟುಂಬ ಇಟಲಿಯಿಂದ ಭಾರತಕ್ಕೆ ವಾಪಸ್ ಬರ್ತಿದೆ. ಕೊಹ್ಲಿ ದಂಪತಿ ಮಧುಚಂದ್ರ ಮುಗಿಸಿ ಬರ್ತಿದ್ದಂತೆ ಭಾರತದಲ್ಲಿ ಎರಡು ರಿಸೆಪ್ಷನ್ ನಡೆಯಲಿದೆ. ಡಿಸೆಂಬರ್ 21ರಂದು ಕುಟುಂಬಸ್ಥರ ಪರವಾಗಿ ದೆಹಲಿಯಲ್ಲಿ ರಿಸೆಪ್ಷನ್ ನಡೆಯಲಿದೆ.

ಡಿಸೆಂಬರ್ 26ರಂದು ಮುಂಬೈನಲ್ಲಿ ಕೊಹ್ಲಿ-ಅನುಷ್ಕಾ ಗ್ರ್ಯಾಂಡ್ ಪಾರ್ಟಿ ನೀಡಲಿದ್ದಾರೆ ಎನ್ನಲಾಗಿದೆ. ಈ ಪಾರ್ಟಿಯಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ಆಟಗಾರರು ನವ ಜೋಡಿಗೆ ಶುಭಕೋರಲಿದ್ದಾರೆ. ಡಿಸೆಂಬರ್ 11ರಂದು ಕೊಹ್ಲಿ-ಅನುಷ್ಕಾ ಇಟಲಿಯಲ್ಲಿ ಸಪ್ತಪದಿ ತುಳಿದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...