alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಬಂದ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆ ಜೂನ್ 15 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿಗೆ ಹೊರಟ ಜೋಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ್ರು.

ಕಳೆದ ಕೆಲ ದಿನಗಳಿಂದ ಕೊಹ್ಲಿ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕುತ್ತಿಗೆ ನೋವಿನಿಂದಾಗಿ ಇಂಗ್ಲೆಂಡ್ ಪ್ರವಾಸದ ತಯಾರಿಗೆ ಅಡ್ಡಿಯುಂಟಾಗಿದೆ. ಗಾಯದ ಕಾರಣ ಇಂಗ್ಲೀಷ್ ಕೌಂಟಿಯಲ್ಲಿ ಕೂಡ ಕೊಹ್ಲಿ ಆಡ್ತಿಲ್ಲ. ಫಿಟ್ನೆಸ್ ಪರೀಕ್ಷೆ ನಂತ್ರವೇ ಕೊಹ್ಲಿ ಯುಕೆ ಪ್ರವಾಸದ ಆರಂಭಿಕ ಪಂದ್ಯಗಳಲ್ಲಿ ಆಡ್ತಾರಾ ಎಂಬುದು ಸ್ಪಷ್ಟವಾಗಲಿದೆ.

ಜೂನ್ ಕೊನೆ ವಾರದಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ-ಟ್ವೆಂಟಿ ಅಂತರಾಷ್ಟ್ರೀಯ ಪಂದ್ಯ ನಡೆಯಲಿದೆ. ಫಿಟ್ನೆಸ್ ಪರೀಕ್ಷೆ ಕೊಹ್ಲಿಗೆ ಅಗ್ನಿ ಪರೀಕ್ಷೆ ಎಂದ್ರೂ ತಪ್ಪಾಗಲಾರದು. ಫಿಟ್ನೆಸ್ ಪರೀಕ್ಷೆಗೆ ಕೊಹ್ಲಿ ಸಾಕಷ್ಟು ಕಷ್ಟಪಡ್ತಿದ್ದಾರೆ. ಕೊಹ್ಲಿ 2014ರ ಇಂಗ್ಲೆಂಡ್ ಪ್ರವಾಸ ಚೆನ್ನಾಗಿರಲಿಲ್ಲ. ಆಗಿನ ತಪ್ಪು ಸುಧಾರಿಸಿಕೊಳ್ಳುವ ಗುರಿ ಕೊಹ್ಲಿಯದ್ದು. ಆಗಸ್ಟ್ 1ರಿಂದ ಭಾರತ, ಇಂಗ್ಲೆಂಡ್ ವಿರುದ್ಧ 5 ಟೆಸ್ಟ್, ಮೂರು ಏಕದಿನ ಪಂದ್ಯ ಹಾಗೂ 3 ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...