alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಮ್ ಜೊತೆ ಪೋಸ್ ನೀಡಿ ಟ್ರೋಲ್ ಆದ ಅನುಷ್ಕಾ…!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಇವರಿಬ್ಬರನ್ನು ಸದಾ ಬೆಂಬಲಿಸುತ್ತಾ ಅಭಿಮಾನಿಗಳು ಈಗ ಬೇಸರಗೊಂಡಿದ್ದಾರೆ. ಅಲ್ಲದೆ ಬಿಸಿಸಿಐ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.
ಬಿಸಿಸಿಐ ಹೇರಿದ ನಿಯಮದ ಅನ್ವಯ ಆಟಗಾರರ ಪತ್ನಿಯರು ಹಾಗೂ ಗೆಳತಿ ಟೆಸ್ಟ್ ಪಂದ್ಯದ ವೇಳೆ ಹೊಟೇಲ್ ಗಳಲ್ಲಿ ತಂಗುವಂತಿಲ್ಲ ಎಂದು ಸೂಚಿಸಿತ್ತು. ಆದ್ರೆ, ಅನುಷ್ಕಾ ಮಾತ್ರ ಮೊದಲ ಟೆಸ್ಟ್ ಪಂದ್ಯ ನೋಡಲು ಹೋಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಲಂಡನ್ ನಲ್ಲಿ ರಾಯಭಾರಿ ಕಚೇರಿ ಔತಣಕೂಟ ವ್ಯವಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ತೆಗೆದ ತಂಡದ ಫೋಟೋ ಶೂಟ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಉಪಸ್ಥಿತರಿದ್ದರು. ಅನುಷ್ಕಾ ಕೂಡ ಭಾರತ ತಂಡದ ಜೊತೆ ಪೋಸ್ ಕೊಟ್ಟಿದ್ದು ಅಭಿಮಾನಿಗಳನ್ನು ಕೆರಳಿಸಿದೆ.

ತಂಡದ ಬಸ್ ನಲ್ಲಿಯೂ ಅನುಷ್ಕಾ ಇತ್ತೀಚೆಗೆ ಕಾಣಿಸಿಕೊಂಡಿದ್ದು, ಇದೀಗ ರಾಯಭಾರಿ ಕಚೇರಿಯ ಔತಣಕೂಟದಲ್ಲಿ ಪಾಲ್ಗೊಂಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತರೆ ಆಟಗಾರರಿಗೆ ಇಲ್ಲದ ವಿಶೇಷ ಸೌಲಭ್ಯ ಅನುಷ್ಕಾ ಶರ್ಮಾಗೆ ಮಾತ್ರ ಯಾಕೆ? ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...