alex Certify
ಕನ್ನಡ ದುನಿಯಾ       Mobile App
       

Kannada Duniya

ಸಂದರ್ಶನದಲ್ಲಿ ಅನುಷ್ಕಾ ಶರ್ಮ ಮಾಡಿದ್ದೇನು..?

anuska-aa

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಪತ್ರಕರ್ತೆಯೊಬ್ಬರ ಮೊಬೈಲ್ ಗೆ ಬಂದಿದ್ದ ಕರೆಯನ್ನು ಸ್ವೀಕರಿಸಿ, ಮಾಧ್ಯಮ ಪ್ರತಿನಿಧಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

‘ಫಿಲೌರಿ’ ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅನುಷ್ಕಾ ಶರ್ಮ ಮಾತನಾಡುತ್ತಿದ್ದರು.

ಪತ್ರಕರ್ತೆಯೊಬ್ಬರು ಅನುಷ್ಕಾರ ವಾಯ್ಸ್ ರೆಕಾರ್ಡ್ ಮಾಡಿಕೊಳ್ಳಲು ಅವರ ಸಮೀಪದಲ್ಲೇ ತಮ್ಮ ಮೊಬೈಲ್ ಇಟ್ಟಿದ್ದಾರೆ.

ಅನುಷ್ಕಾ ಮಾತನಾಡುವಾಗಲೇ ಪತ್ರಕರ್ತೆಯ ಫೋನ್ ಗೆ ಅವರ ತಾಯಿಯ ಕರೆ ಬಂದಿದೆ. ಫೋನ್ ರಿಸೀವ್ ಮಾಡಿದ ಅನುಷ್ಕಾ, ‘ಆಂಟಿ ನಿಮ್ಮ ಮಗಳು ನನ್ನ ಸಂದರ್ಶನ ಮಾಡುತ್ತಿದ್ದಾರೆ. ನಾನು ಅನುಷ್ಕಾ ಶರ್ಮ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಆ ಕಡೆಯಿಂದ ಕೇಳಿದ ಕೇಳಿದ ಮಾಹಿತಿಯಂತೆ, ‘ಚೆನ್ನಾಗಿದ್ದೇನೆ. ಆ ಮೇಲೆ ಅವರೇ ಕರೆ ಮಾಡುತ್ತಾರೆ’ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದವರೆಲ್ಲಾ ನಗೆಗಡಲಲ್ಲಿ ತೇಲಿದ್ದಾರೆ. ಬಳಿಕ ಅನುಷ್ಕಾ ತಮ್ಮ ಮಾತನ್ನು ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...