alex Certify
ಕನ್ನಡ ದುನಿಯಾ       Mobile App
       

Kannada Duniya

ಸಂದರ್ಶನ ಪ್ರಕಟಿಸಿದ್ದ ಪತ್ರಿಕೆ ವಿರುದ್ಧ ಅನುಷ್ಕಾ ಗರಂ ಆಗಿದ್ದೇಕೆ…?

ಸೆಲೆಬ್ರಿಟಿಗಳ ಹೇಳಿಕೆಗಳನ್ನೆಲ್ಲ ಮಾಧ್ಯಮಗಳಲ್ಲಿ ತಿರುಚುತ್ತಾರೆ ಅನ್ನೋ ಅಸಮಾಧಾನ ಇದ್ದೇ ಇದೆ. ಆದ್ರೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಬಂಗಾಳಿ ದಿನ ಪತ್ರಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದಿನ ಪತ್ರಿಕೆ ಅನುಷ್ಕಾ ಶರ್ಮಾರ ನಕಲಿ ಸಂದರ್ಶನವನ್ನು ಪ್ರಕಟಿಸಿದೆಯಂತೆ.

ಆ ಪತ್ರಿಕೆಗೆ ಸಂದರ್ಶನವನ್ನೇ ಕೊಟ್ಟಿಲ್ಲ, ಆದ್ರೆ ನಕಲಿ ಸಂದರ್ಶನವನ್ನು ಪ್ರಕಟಿಸಿದ್ದಾರೆ ಅಂತಾ ಅನುಷ್ಕಾ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇ ಸಮಯ್ ನಂತಹ ಪ್ರತಿಷ್ಠಿತ ದಿನಪತ್ರಿಕೆ ಕೃತ್ರಿಮ ಸಂದರ್ಶನ ಪ್ರಕಟಿಸುವುದು ದುರಂತ ಅಂತಾ ಅನುಷ್ಕಾ ಪ್ರತಿಕ್ರಿಯಿಸಿದ್ದಾರೆ.

ಅನುಷ್ಕಾ ಫೋಟೋ ಸಮೇತ ಸಂದರ್ಶನವನ್ನು ಇ-ಸಮಯ್ ಪತ್ರಿಕೆ ಪ್ರಕಟಿಸಿದೆ. ಮದುವೆ, ಹನಿಮೂನ್, ವಿರಾಟ್ ಕೊಹ್ಲಿ ಬಗೆಗೆಲ್ಲ ಅನುಷ್ಕಾ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಪತ್ರಿಕೆ ದುರುಪಯೋಗಪಡಿಸಿಕೊಂಡಿದೆ ಅಂತಾ ಅನುಷ್ಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...