alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ನಟಿಯಾಗಲು ಕರೀನಾ ಕಾರಣವಂತೆ

anushka-2

ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿರುವ ನಟಿ ಅನುಷ್ಕಾ ಶರ್ಮಾ ಈ ಸ್ಥಾನಕ್ಕೆ ಬರಲು ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಕಾರಣವಂತೆ. ಈ ವಿಷ್ಯವನ್ನು ಅನುಷ್ಕಾ ಬಾಯ್ಬಿಟ್ಟಿದ್ದಾಳೆ.

ಜಬ್ ಹ್ಯಾರಿ ಮೆಟ್ ಸೆಜಲ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಅನುಷ್ಕಾ, ಕರೀನಾ ಬಗ್ಗೆ ಮಾತನಾಡಿದ್ದಾಳೆ. 2007ರಲ್ಲಿ ಬಂದ ಇಮ್ತಿಯಾಜ್ ಅಲಿ ನಿರ್ದೇಶನದ ಜಬ್ ವಿ ಮೆಟ್ ಚಿತ್ರದಲ್ಲಿ ಕರೀನಾ ನಟನೆ ನೋಡಿ ಅನುಷ್ಕಾ ಆಕರ್ಷಿತಳಾಗಿದ್ದಳಂತೆ. ಕರೀನಾ ನಟನೆ ನೋಡಿದ ನಂತ್ರ ತಾನೂ ಚಿತ್ರರಂಗಕ್ಕೆ ಬರಬೇಕೆಂದು ಕನಸು ಕಾಣಲು ಶುರುಮಾಡಿದ್ದಳಂತೆ.

ಇಮ್ತಿಯಾಜ್ ಅಲಿ ಜಬ್ ಹ್ಯಾರಿ ಮೆಟ್ ಸೆಜಲ್ ಆಫರ್ ನೀಡ್ತಿದ್ದಂತೆ ಕಥೆ ಕೇಳಿದ ಅನುಷ್ಕಾ ಏನೂ ಯೋಚನೆ ಮಾಡದೆ ಯಸ್ ಎಂದ್ಲಂತೆ. ಇಮ್ತಿಯಾಜ್ ಜಬ್ ವಿ ಮೆಟ್ ಚಿತ್ರವನ್ನು ಅಪ್ಪ-ಅಮ್ಮನ ಜೊತೆ ನೋಡಿದ್ದೆ. ಗೀತ್ ಪಾತ್ರ ನನಗೆ ತುಂಬಾ ಇಷ್ಟವಾಗಿತ್ತು. ಅಲ್ಲಿಂದ ಈವರೆಗೂ ಇಮ್ತಿಯಾಜ್ ಚಿತ್ರದಲ್ಲಿ ನಟಿಸಲು ಯಾವಾಗ ಅವಕಾಶ ಸಿಗುತ್ತೆ ಅಂತಾ ಕಾಯ್ತಿದ್ದೆ ಎಂದು ಅನುಷ್ಕಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...