alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ನಂತ್ರ ಅನುಷ್ಕಾ ರಣವೀರ್ ಗೆ ಹೇಳಿದ್ಲು ಈ ಮಾತು

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಈಗ ವಿರಾಟ್ ಕೊಹ್ಲಿ ಪತ್ನಿ. ಆದ್ರೆ ಅನುಷ್ಕಾ ಹೆಸ್ರು ರಣವೀರ್ ಸಿಂಗ್ ಜೊತೆ ಥಳಕು ಹಾಕಿಕೊಂಡಿತ್ತು. ಈಗ್ಲೂ ಈ ವಿಷ್ಯದ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ರಣವೀರ್ ಹಾಗೂ ಅನುಷ್ಕಾ ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಮೂಲಕವೇ ಇಬ್ಬರು ಹತ್ತಿರವಾಗಿದ್ದರು. ನಂತ್ರ ಮತ್ತೆರಡು ಚಿತ್ರಗಳಲ್ಲಿ ನಟಿಸಿದ್ದ ಜೋಡಿ ಬಗ್ಗೆ ಡೇಟಿಂಗ್ ಸುದ್ದಿ ಹರಿದಾಡ್ತಿತ್ತು.

ಕೆಲವೇ ದಿನಗಳಲ್ಲಿ ಇಬ್ಬರೂ ಬೇರೆಯಾದ್ರು. ಕರಣ್ ಜೋಹರ್ ಚಾಟ್ ಶೋಗೆ ಬಂದಿದ್ದ ಅನುಷ್ಕಾ ಹಾಗೂ ರಣವೀರ್, ಬ್ರೇಕ್ ವಿಷ್ಯವನ್ನು ಬಹಿರಂಗಪಡಿಸಿದ್ದರು. ಅನುಷ್ಕಾ, ರಣವೀರ್ ಬ್ರೇಕ್ ಅಪ್ ಗೆ ಕಾರಣವೇನು ಎಂಬುದನ್ನು ಹೇಳಿದ್ದರು. ರಣವೀರ್ `ಡರ್ಟಿ ಬಾಯ್’. ಹಾಗಾಗಿ ದೂರವಾದೆ ಎಂತಾ ನಗುತ್ತಲೆ ಕಾಲೆಳೆದಿದ್ದರು.

ರಣವೀರ್ ಹಾಗೂ ಅನುಷ್ಕಾ ಬೇರೆಯಾಗಿ ತುಂಬಾ ವರ್ಷ ಕಳೆದಿದೆ. ಆದ್ರೆ ರಣವೀರ್, ಅನುಷ್ಕಾ ಸ್ನೇಹ ಮರೆತಿಲ್ಲ. ಸಂದರ್ಶನವೊಂದರಲ್ಲಿ ರಣವೀರ್ ಈ ಬಗ್ಗೆ ಹೇಳಿದ್ದರು. ಅನುಷ್ಕಾ ಈಗಲೂ ಸ್ಪೆಷಲ್ ಕೆಟಗರಿಯಲ್ಲಿ ಬರ್ತಾರೆ. ಅನುಷ್ಕಾ ಸ್ನೇಹವನ್ನು ನಾನು ಮಿಸ್ ಮಾಡಿಕೊಳ್ತೇನೆ. ನನ್ನ ವಿರುದ್ಧ ಬರೆದ ಲೇಖನಕ್ಕಿಂತ ಅನುಷ್ಕಾ ವಿರುದ್ಧ ಬರೆದ ಲೇಖನ ಓದಿದ್ರೆ ನನಗೆ ಕೋಪ ಬರುತ್ತೆ ಎಂದು ರಣವೀರ್ ಹೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...