alex Certify
ಕನ್ನಡ ದುನಿಯಾ       Mobile App
       

Kannada Duniya

ಆನೆ ಮೇಲೆ ನಡೆದ ದೌರ್ಜನ್ಯ ನೋಡಿ ಶಾಕ್ ಆಗಿದ್ದಾರೆ ಕೊಹ್ಲಿ ಪತ್ನಿ

ಹಾರರ್ ಚಿತ್ರ ಪರಿ ಮೂಲಕ ಪ್ರೇಕ್ಷಕರಲ್ಲಿ ಭಯ ಮೂಡಿಸಿದ್ದ ನಟಿ ಅನುಷ್ಕಾ ಶರ್ಮಾ ಈಗ ಖುದ್ದು ಬೆದರಿ ಹೋಗಿದ್ದಾರೆ. ಜೈಪುರದಲ್ಲಿ ಆನೆಯೊಂದನ್ನು ಥಳಿಸುತ್ತಿರುದನ್ನು ನೋಡಿ ಆತಂಕಗೊಂಡಿದ್ದಾರೆ. ಅಮೆರ್ ಫೋರ್ಟ್ ಬಳಿ ನಡೆದ ಘಟನೆ ಇದು.

ನಂಬರ್ 44 ಹೆಸರಿನ ಆನೆಗೆ ಜನರು ಮನಬಂದಂತೆ ಥಳಿಸಿದ್ದಾರೆ. ಆ ಫೋಟೋವನ್ನು ಟ್ವೀಟ್ ಮಾಡಿರೋ ಅನುಷ್ಕಾ, ಕ್ರೂರ ಜನರ ಮೃಗೀಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸನ್ನಿ ಲಿಯೋನ್, ಇಶಾ ಗುಪ್ತಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇದನ್ನು ರಿಟ್ವೀಟ್ ಮಾಡಿದ್ದಾರೆ.

ಪೆಟಾ ಇಂಡಿಯಾ ಆನೆ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ರಾಜಸ್ತಾನ ಅರಣ್ಯ ಇಲಾಖೆಗೆ ದೂರು ನೀಡಿದೆ. ನಂಬರ್ 44 ಆನೆಯನ್ನು ನೋಡಿಕೊಳ್ತಿದ್ದ ವಸೀದ್ ಖಾನ್ ಎಂಬಾತನಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ. ಅಮೆರಿಕದ ಪ್ರವಾಸಿಗನೊಬ್ಬ ಆನೆಯನ್ನು ಥಳಿಸುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...