alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಪ್ ಲಾಕ್ ಬಗ್ಗೆ ಕೊಹ್ಲಿ ಮನದನ್ನೆ ಹೇಳಿದ್ದೇನು..?

anushka

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ‘ಸುಲ್ತಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯಿಂದ ದೂರವಾದ ಅನುಷ್ಕಾ, ನಂತರದಲ್ಲಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರಾದರೂ ಇದೀಗ ಕೊಹ್ಲಿ ಜೊತೆ ಮತ್ತೇ ಒಂದಾಗಿದ್ದಾರೆ.

ವರ್ಷಗಳ ಹಿಂದೆ ಅನುಷ್ಕಾ ಶರ್ಮ, ಮದುವೆಯಾದ ನಂತರದಲ್ಲಿ ಲಿಪ್ ಲಾಕ್, ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡರೇ ತಪ್ಪೇನು ಎಂದು ಕೇಳಿದ್ದರು. ಅಲ್ಲದೇ, ಕೆಲವು ನಟಿಯರು ಮದುವೆಯಾದ ಬಳಿಕ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ನಾನು ಹಾಗೆಲ್ಲಾ ಮಾಡಲ್ಲ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದರು. ಅದಾಗಿ ಎಷ್ಟೋ ದಿನಗಳ ಬಳಿಕ ಅನುಷ್ಕಾ ಅವರು ಇತ್ತೀಚೆಗೆ ಮ್ಯಾಗ್ ಜಿನ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ.

ಸಂದರ್ಶನದಲ್ಲಿ, ವರ್ಷಗಳ ಹಿಂದೆ ಅನುಷ್ಕಾ ನೀಡಿದ್ದ, ಮದುವೆ ನಂತರದ ಲಿಪ್ ಲಾಕ್ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಡಗಿ ಅನುಷ್ಕಾ, ನಾನು ಹೇಳಿಕೆ ನೀಡಿದಾಗ, ಬೋಲ್ಡ್ ಹೇಳಿಕೆ ಎಂದೆಲ್ಲಾ ಕೆಲವರು ಹೇಳಿದ್ದರು. ನಾನೂ ಮನುಷ್ಯಳು. ಆದರೆ ಇನ್ನೂ ಪರಿಪೂರ್ಣಳಾಗಿಲ್ಲ ಎಂಬುದನ್ನು ಹೇಳಬಯಸುತ್ತೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...