alex Certify
ಕನ್ನಡ ದುನಿಯಾ       Mobile App
       

Kannada Duniya

ದೂರವಾದ ಕೊಹ್ಲಿ, ಕುಸ್ತಿ ಕಲಿಯುತ್ತಿರುವ ಅನುಷ್ಕಾ

ANUSHKA BOXING

ಸಿನಿಮಾದಲ್ಲಿ ನಟಿಸುವುದೆಂದರೆ ಸುಮ್ಮನೆ ಮಾತಲ್ಲ, ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕು. ಪಾತ್ರಗಳಿಗೆ ಜೀವತುಂಬಲು, ಸಹಜ ಅಭಿನಯ ಮೂಡಿಬರಲು ಕಲಾವಿದರು ಹೇಗೆಲ್ಲಾ ಶ್ರಮವಹಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.

ಗೆಳೆಯ, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ದೂರವಾಗಿರುವ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಅಳುತ್ತಾ ಸುಮ್ಮನೆ ಕೂತಿಲ್ಲ. ಅವರೀಗ ತಮ್ಮ ಮುಂದಿನ ಚಿತ್ರಕ್ಕೆ ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ. ಅನುಷ್ಕಾ ಶರ್ಮ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ‘ಸುಲ್ತಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕೆ ಜೀವ ತುಂಬಲು ಕುಸ್ತಿಯ ಪಟ್ಟುಗಳನ್ನು ಕಲಿಯತೊಡಗಿದ್ದಾರೆ.

ಯಶ್ ಚೋಪ್ರಾ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ‘ಸುಲ್ತಾನ್’ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅನುಷ್ಕಾ ತರಬೇತುದಾರರಿಂದ ಕುಸ್ತಿಯ ವಿವಿಧ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ತಾವು ಕಸ್ತಿ ಟ್ರೈನಿಂಗ್ ಪಡೆದುಕೊಳ್ಳುತ್ತಿರುವ ಫೋಟೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...