alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವಿರಾಟ್-ಅನುಷ್ಕಾರ ಮದುವೆ ಪೋಟೋ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕಳೆದ ವರ್ಷದ ಡಿಸೆಂಬರ್ ನಲ್ಲಿ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಟಲಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು.

ವಿವಾಹ ಆದ ಬಳಿಕ ನವದೆಹಲಿ ಹಾಗೂ ಮುಂಬೈನಲ್ಲಿ ಅದ್ದೂರಿ ಔತಣ ಕೂಟ ನೀಡಿದ್ದು, ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನಾಡಲು ಕೊಹ್ಲಿ ತೆರಳಿದ್ದರೆ ಕೆಲ ದಿನಗಳ ಕಾಲ ಪತಿಯೊಂದಿಗೆ ದಕ್ಷಿಣ ಆಫ್ರಿಕಾದಲ್ಲಿದ್ದ ಅನುಷ್ಕಾ ಶರ್ಮ ತಮ್ಮ ಚಿತ್ರದ ಶೂಟಿಂಗ್ ಸಲುವಾಗಿ ಭಾರತಕ್ಕೆ ಮರಳಿದ್ದಾರೆ.

ವಿವಾಹವಾಗಿ 2 ತಿಂಗಳು ಕಳೆದಿದ್ದರೂ ಅಭಿಮಾನಿಗಳಿಗೆ ಮಾತ್ರ ವಿವಾಹ ಕುರಿತಾದ ಕುತೂಹಲ ಇನ್ನು ತಣಿದಿಲ್ಲ. ಇದರ ಮಧ್ಯೆ ಅನುಷ್ಕಾ ಶರ್ಮ ಫ್ಯಾನ್ ಕ್ಲಬ್ ವಿವಾಹದ ಹಾಗೂ ಆರತಕ್ಷತೆಯ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ.

ಒಂದು ಚಿತ್ರದಲ್ಲಿ ಕೈಗೆ ಮದರಂಗಿ ಹಚ್ಚಿಕೊಂಡಿರುವ ಅನುಷ್ಕಾ, ತಮ್ಮ ಎಂಗೇಜ್ ಮೆಂಟ್ ರಿಂಗ್ ಪ್ರದರ್ಶಿಸುತ್ತಿದ್ದರೆ, ಮತ್ತೊಂದು ಚಿತ್ರದಲ್ಲಿ ಅನುಷ್ಕಾರ ಕೈ ಹಿಡಿದ ಕೊಹ್ಲಿ ಅವರನ್ನು ವೇದಿಕೆಗೆ ಕರೆದೊಯ್ಯುತ್ತಿದ್ದಾರೆ. ಮುಂಬೈನಲ್ಲಿ ನಡೆದ ಆರತಕ್ಷತೆಯ ಚಿತ್ರವೊಂದನ್ನು ಸಹ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಅನುಷ್ಕಾ ಶರ್ಮ, ಶಿಖರ್ ಧವನ್ ಪತ್ನಿ ಜೊತೆ ಸ್ಟೆಪ್ ಹಾಕುತ್ತಿದ್ದಾರೆ.

Mehendi ❤️😍

A post shared by Anushka Sharma Kohli ❤️ (@anushkasharma.club) on

Good morning everyone! ❤️😍

A post shared by Anushka Sharma Kohli ❤️ (@anushkasharma.club) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...