alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವಿರುಷ್ಕಾ ಜೋಡಿಯ ಈ ಫೋಟೋ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ನಾ ನಿನಗೆ ನೀ ನನಗೆ ಎಂಬಂತಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಲೈಕ್ಸ್ ಗಳನ್ನ ಪಡೀತಿದೆ. ಮೇಡ್ ಫಾರ್ ಈಚ್ ಅದರ್ ಎಂಬಂತಾ ಉದ್ಘಾರವನ್ನು ಫೋಟೋ ನೋಡಿದವರು ತೆಗೀತಿದಾರೆ. ಅಷ್ಟಕ್ಕೂ ಆ ಫೋಟೊದಲ್ಲಿ ಏನಿದೆ ಅಂದುಕೊಂಡ್ರಾ…?

ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದೆ. ಟಿ-20 ಮತ್ತು ಏಕದಿನ ಸರಣಿಗಳನ್ನ ಮುಗಿಸಿರುವ ಟೀಮ್ ಇಂಡಿಯಾ ಟೆಸ್ಟ್ ಪಂದ್ಯಗಳ ಸರಣಿಗೆ ತಯಾರಾಗುತ್ತಿದೆ. ಇದರ ನಡುವೆ ಲಂಡನ್ ಬೀದಿಗಳಲ್ಲಿ ಜೊತೆಯಾಗಿ ಹಿತವಾಗಿ ಕಾಣಿಸಿಕೊಂಡಿರುವ ಯಂಗ್ ಕಪಲ್ಸ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಮೂಡ್ನಲ್ಲಿ ಇರುವಂತಿದೆ.

ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿರುವ ಜೋಡಿ ಸೆಲ್ಫಿಯೊಂದನ್ನ ಕ್ಲಿಕ್ಕಿಸಿಕೊಂಡಿದೆ. ವಿರಾಟ್ ಭುಜದ ಮೇಲೆ ಅನುಷ್ಕಾ ತಲೆ ಇಟ್ಟು ಒರಗಿ ಕುಳಿತ ಸೆಲ್ಫಿಯನ್ನ ಅಭಿಮಾನಿಗಳು ತುಂಬಾನೇ ಇಷ್ಟಪಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಕೆಲವೇ ನಿಮಿಷಗಳಲ್ಲಿ ಈ ಫೋಟೋ 10 ಲಕ್ಷ ಲೈಕ್ಸ್ಗಳನ್ನ ಪಡೆದಿದೆ. ಶಿಖರ್ ಧವನ್ ಕುಟುಂಬ ಕೂಡ ಈ ಸಮಯದಲ್ಲಿ ವಿರುಷ್ಕಾ ಜೊತೆ ಕಾಣಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...