alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕೊಹ್ಲಿ ವಿಡಿಯೋದಲ್ಲಿದ್ದ ಯುವಕನ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ರಸ್ತೆಯಲ್ಲಿ ಕಸ ಎಸೆದಿದ್ದವರೊಬ್ಬರಿಗೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಈ ವಿಡಿಯೋ ಈಗ ಪರ-ವಿರೋಧದ ಅಭಿಪ್ರಾಯಕ್ಕೆ ಕಾರಣವಾಗಿದ್ದು, ವಿಡಿಯೋದಲ್ಲಿದ್ದ ಯುವಕ ಅರ್ಹಾನ್ ಸಿಂಗ್ ಹಾಗೂ ಆತನ ತಾಯಿ ಗೀತಾಂಜಲಿ, ಸಾಮಾಜಿಕ ಜಾಲತಾಣದಲ್ಲೇ ಕೊಹ್ಲಿ ಹಾಗೂ ಅನುಷ್ಕಾರನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೇ ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಟೀಕಿಸಿದ್ದರು.

ಇದರ ಮಧ್ಯೆ ಅನುಷ್ಕಾಳಿಂದ ಟೀಕೆಗೆ ಗುರಿಯಾಗಿದ್ದ ಯುವಕ ಅರ್ಹಾನ್ ಸಿಂಗ್ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಈತ ಸಹ ಬಾಲಿವುಡ್ ನಟ ಎನ್ನಲಾಗಿದ್ದು, ಶಾರುಕ್ ಚಿತ್ರದಲ್ಲೂ ನಟಿಸಿದ್ದಾನಂತೆ. ಬಾಲನಟನಾಗಿ ಬಾಲಿವುಡ್ ಗೆ ಕಾಲಿಟ್ಟಿದ್ದ ಅರ್ಹಾನ್ ಸಿಂಗ್, ಹಲವಾರು ಸಿನಿಮಾ, ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾನೆನ್ನಲಾಗುತ್ತಿದ್ದು, ಕೊಹ್ಲಿ ವಿಡಿಯೋ ನೋಡಿದ ನೆಟ್ಟಿಗರು ಇಷ್ಟೆಲ್ಲ ಮಾಹಿತಿಯನ್ನು ಕಲೆಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...