alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಅನುಷ್ಕಾ, ಸಾಕ್ಷಿ ಧೋನಿ ಕುರಿತ ಕುತೂಹಲಕಾರಿ ಸಂಗತಿ

ಕ್ರಿಕೆಟ್ ಹಾಗೂ ಬಾಲಿವುಡ್ ಅಂದ್ರೆ ಗ್ಲಾಮರ್ ಹಾಗೂ ಪ್ರತಿಭೆಯ ಮಿಶ್ರಣ. ಅಭಿಮಾನಿಗಳು ಅತಿ ಹೆಚ್ಚಾಗಿ ನೆಚ್ಚಿಕೊಂಡಿರೋ ಕ್ಷೇತ್ರಗಳಿವು. ಅದರಲ್ಲೂ ಎಂ.ಎಸ್. ಧೋನಿ, ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಕ್ರಿಕೆಟಿಗರ ಗೆಳತಿಯರ ಬಗೆಗಿನ ಕುತೂಹಲಕಾರಿ ಸಂಗತಿಗಳು ಅಭಿಮಾನಿಗಳಿಗೆ ಖುಷಿ ಕೊಡುತ್ತವೆ. ಲೇಟೆಸ್ಟ್ ನ್ಯೂಸ್ ಏನಂದ್ರೆ ಸಾಕ್ಷಿ ಧೋನಿ ಹಾಗೂ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಇಬ್ಬರೂ ಬಾಲ್ಯದ ಗೆಳತಿಯರು ಅನ್ನೋದು.

ಇವರಿಬ್ಬರು ಜೊತೆಯಾಗಿರುವ ಅಪರೂಪದ ಫೋಟೋ ಕೂಡ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಇಬ್ಬರೂ ಆಸ್ಸಾಂನಲ್ಲಿ ಒಂದೇ ಶಾಲೆಯಲ್ಲಿ ಓದಿದ್ದರಂತೆ. ಅನುಷ್ಕಾ ತಂದೆ ಸೇನೆಯಲ್ಲಿದ್ದಿದ್ದರಿಂದ ಅವರಿಗೆ ಬೇರೆ ಬೇರೆ ಕಡೆಗೆ ವರ್ಗವಾಗುತ್ತಿತ್ತು.

ಹಾಗಾಗಿ ಅನುಷ್ಕಾ ದೇಶದ ಮೂಲೆ ಮೂಲೆ ಸುತ್ತಿದ್ದಾಳೆ, ಬೇರೆ ಬೇರೆ ಶಾಲೆಗಳಲ್ಲಿ ಓದಿದ್ದಾಳೆ. ಅನುಷ್ಕಾ ಹಾಗೂ ಸಾಕ್ಷಿ ಸಹಪಾಠಿಗಳಾಗಿದ್ದು ಕೂಡ ಇದೇ ಕಾರಣಕ್ಕೆ. ಅದೇನೇ ಆದ್ರೂ ಇಬ್ಬರೂ ಬಾಲ್ಯದ ಗೆಳತಿಯರು ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...