alex Certify
ಕನ್ನಡ ದುನಿಯಾ       Mobile App
       

Kannada Duniya

15ನೇ ವಯಸ್ಸಿನಲ್ಲೇ ಈ ನಟಿಗೆ ಆಗಿತ್ತು ಕಹಿ ಅನುಭವ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಖ್ಯಾತ ನಟಿಯರು ಕೂಡ ಎಷ್ಟೋ ವರ್ಷ ಕಾಯ್ತಾರೆ. ಆದ್ರೆ ಅನುಷ್ಕಾ ಶರ್ಮಾ ತಮ್ಮ ಚೊಚ್ಚಲ ಚಿತ್ರದಲ್ಲೇ ಶಾರುಖ್ ಗೆ ಜೋಡಿಯಾಗಿದ್ರು. ‘ರಬ್ ನೆ ಬನಾ ದೀ ಜೋಡಿ’ ಚಿತ್ರದಲ್ಲಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ್ದ ಅನುಷ್ಕಾ ಈಗ ಬಿಟೌನ್ ನ ಬಹುಬೇಡಿಕೆಯ ನಟಿ.

ಅಷ್ಟೇ ಅಲ್ಲ ಚಿತ್ರ ನಿರ್ಮಾಣಕ್ಕೂ ಅನುಷ್ಕಾ ಕೈಹಾಕಿದ್ದಾರೆ. ಈ ಅವಕಾಶಗಳು ಮತ್ತು ಯಶಸ್ಸು ಯಾವುದೂ ಆಕೆಗೆ ಸುಲಭವಾಗಿ ಸಿಕ್ಕಿಲ್ಲ. ಮಾಡೆಲಿಂಗ್ ಮಾಡ್ತಿದ್ದ ಸಮಯದಲ್ಲೇ ಅನುಷ್ಕಾ ಎಷ್ಟೋ ಬಾರಿ ತಿರಸ್ಕೃತರಾಗಿದ್ರು. ಹಲವು ಪ್ರಾಜೆಕ್ಟ್ ಗಳು ಕೈತಪ್ಪಿ ಹೋಗಿದ್ವು. 15 ವರ್ಷದವಳಿದ್ದಾಗ್ಲೇ ನನಗೆ ಈ ಕಹಿ ಅನುಭವವಾಗಿತ್ತು ಎನ್ನುತ್ತಾರೆ ಆಕೆ.

ಈ ರೀತಿ ಪದೇ ಪದೇ ಅವಕಾಶ ಕೈತಪ್ಪಿ ಹೋಗೋದು, ಬದಲಿಗೆ ಇನ್ಯಾರಿಗೋ ಚಾನ್ಸ್ ಸಿಗೋದು ಇದನ್ನೆಲ್ಲ ನೋಡಿ ಅನುಷ್ಕಾ ಮನಸ್ಸಿಗೆ ನೋವಾಗುತ್ತಿತ್ತಂತೆ. ಆದ್ರೆ ಎಲ್ಲವನ್ನೂ ದಿಟ್ಟವಾಗಿ ಎದುರಿಸಿದ್ದಾರೆ. ರಬ್ ನೇ ಬನಾ ದಿ ಜೋಡಿ ಚಿತ್ರಕ್ಕೆ ಸಹಿ ಮಾಡುವ ಸಂದರ್ಭದಲ್ಲೂ ಆದಿತ್ಯ ಚೋಪ್ರಾ ಸ್ಪಷ್ಟವಾಗಿ ಹೇಳಿದ್ದರಂತೆ, ನಿನಗಿಂತ್ಲೂ ಸುಂದರವಾದ ನಟಿಯರಿದ್ದಾರೆ, ಆದ್ರೆ ಪ್ರತಿಭೆ ಗುರುತಿಸಿ ಅವಕಾಶ ಕೊಡುತ್ತಿದ್ದೇನೆ ಅಂತ.

ಟೀಕೆ-ಟಿಪ್ಪಣಿಗಳಿಗೆಲ್ಲ ಅನುಷ್ಕಾ ತಲೆಕೆಡಿಸಿಕೊಂಡಿರಲಿಲ್ಲ. ಕೇವಲ ನಟನೆಯ ಬಗ್ಗೆ ಮಾತ್ರ ಫೋಕಸ್ ಮಾಡಿದ್ದರು. ತಂತಾನೇ ಟೀಕಾಕಾರರ ಬಾಯಿ ಮುಚ್ಚಿಹೋಯ್ತು. ಏನೇ ಇದ್ರೂ ನೇರವಾಗಿ ಹೇಳಬೇಕು ಅನ್ನೋದು ಅನುಷ್ಕಾರ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...