alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆ-ಮಾವನಿಂದ ಕೊಹ್ಲಿಗೆ ಸಿಕ್ತು ವ್ಯಾಲೆಂಟೈನ್ಸ್ ಡೇ ಗಿಫ್ಟ್

ಬಾಲಿವುಡ್ ಹಾಗೂ ಕ್ರಿಕೆಟ್ ತಂಡದ ಅತ್ಯಂತ ಪ್ರಸಿದ್ಧ ಜೋಡಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ. ಡಿಸೆಂಬರ್ 11ರಂದು ವಿವಾಹ ಜೀವನಕ್ಕೆ ಕಾಲಿಟ್ಟ ಜೋಡಿ ಈಗ ಕೆಲಸದಲ್ಲಿ ಬ್ಯುಸಿ. ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದರೆ ಅನುಷ್ಕಾ ಭಾರತದಲ್ಲಿ ಶೂಟಿಂಗ್ ಮಾಡ್ತಿದ್ದಾಳೆ. ಈ ವ್ಯಾಲೆಂಟೈನ್ಸ್ ವೀಕನ್ನು ಇಬ್ಬರೂ ಒಟ್ಟಿಗೆ ಎಂಜಾಯ್ ಮಾಡಲು ಸಾಧ್ಯವಾಗ್ತಿಲ್ಲ.

ಪ್ರೇಮಿಗಳ ದಿನದಂದು ದೂರ ಇರಲಿರುವ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ವಿರಾಟ್ ಕೊಹ್ಲಿ ಅತ್ತೆ-ಮಾವ, ಮಗಳು-ಅಳಿಯನಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ನೀಡಿದ್ದಾರೆ. ವರದಿ ಪ್ರಕಾರ, ಅನುಷ್ಕಾ ತಂದೆ ನಿವೃತ್ತ ಕರ್ನಲ್ ಅಜಯ್ ಕುಮಾರ್ ಶರ್ಮಾ ಪತ್ನಿ ಜೊತೆ ಹೊಸ ಲೇಖಕಿ ತೇಜಸ್ವಿನಿ ದಿವ್ಯ ನಾಯ್ಕ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಈ ವೇಳೆ ಲೇಖಕಿ ಸಹಿಯಿರುವ ರೋಮ್ಯಾಂಟಿಕ್ ಕವನ ಸಂಗ್ರಹವನ್ನು ತಮ್ಮ ಅಳಿಯ-ಮಗಳಿಗಾಗಿ ತೆಗೆದಿಟ್ಟಿದ್ದಾರೆ.

ರೋಮ್ಯಾಂಟಿಕ್ ಕವನ ಸಂಗ್ರಹ ನೋಡಿ ಅನುಷ್ಕಾ ಹಾಗೂ ಕೊಹ್ಲಿ ಖುಷಿಯಾಗೋದು ನಿಶ್ಚಿತ. ಕೊಹ್ಲಿ, ಅನುಷ್ಕಾ ಕೈ ಹಿಡಿದು 2 ತಿಂಗಳಾಗಿದೆ. ಆದ್ರೆ ಈಗ್ಲೂ ನವ ಜೋಡಿಗೆ ಶುಭಾಶಯಗಳು ಹರಿದು ಬರ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...