alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ರೂಪದಲ್ಲಿ ಮತ್ತೆ ಬರಲಿದೆ 90ರ ದಶಕದ ಅಂತ್ಯಾಕ್ಷರಿ

1990ರ ದಶಕದಲ್ಲಿ ಎಲ್ರೂ ಪ್ರತಿ ಶುಕ್ರವಾರ ಸಂಜೆಯಾಗೋದನ್ನೇ ಕಾಯುತ್ತಿದ್ರು. ಟಿವಿಯಲ್ಲಿ ಪ್ರಸಾರ ವಾಗುತ್ತಿದ್ದ ಅಂತ್ಯಾಕ್ಷರಿ ಕಾರ್ಯಕ್ರಮ ವೀಕ್ಷಿಸ್ತಾ ಇದ್ರು. 1993ರಲ್ಲಿ ಆರಂಭವಾಗಿದ್ದ ಈ ಕಾರ್ಯಕ್ರಮ, 15 ಸೀಸನ್ ಗಳಲ್ಲಿ ಪ್ರಸಾರವಾಗಿದೆ.

ಅನ್ನು ಕಪೂರ್, ಪಲ್ಲವಿ ಜೋಶಿ, ದುರ್ಗಾ ಜಸ್ರಾಜ್, ರಾಜೇಶ್ವರಿ ಸಚ್ ದೇವ್, ರೇಣುಕಾ ಸಹಾನೆ ಹಾಗೂ ಶೆಫಾಲಿ ಛಾಯಾರಂತಹ ಸುಪ್ರಸಿದ್ಧ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ನಿರ್ಮಾಪಕರಾಗಿದ್ದ ಗಜೇಂದ್ರ ಸಿಂಗ್, ಅಂತ್ಯಾಕ್ಷರಿಯನ್ನು ಆಧುನಿಕ ಸ್ಪರ್ಷದೊಂದಿಗೆ ಮತ್ತೆ ತರಲು ಮುಂದಾಗಿದ್ದಾರೆ.

ಇನ್ನೆರಡು ತಿಂಗಳುಗಳೊಳಗೆ ಕಾರ್ಯಕ್ರಮ ಆರಂಭವಾದ್ರೂ ಅಚ್ಚರಿಯಿಲ್ಲ. ಆದ್ರೆ ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ ಅನ್ನೋ ವಿವರ ಲಭ್ಯವಾಗಿಲ್ಲ. ಕಾಮಿಡಿಯನ್ ಸುನಿಲ್ ಗ್ರೋವರ್ ಹಾಗೂ ಕಿರುತೆರೆ ನಟಿ ಹೀನಾ ಖಾನ್ ಬಳಿ ಅಂತ್ಯಾಕ್ಷರಿ ನಿರೂಪಣೆ ಮಾಡುವಂತೆ ಗಜೇಂದ್ರ ಸಿಂಗ್ ಮನವಿ ಮಾಡಿಕೊಂಡಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...