alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ಹರಿದಾಡುತ್ತಿದೆ ರಜನಿಯ ಎಂಟ್ರಿ ಸೀನ್

kabali_640ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಜುಲೈ 22 ರಂದು ವಿಶ್ವದಾದ್ಯಂತ ತೆರೆ ಕಾಣಲಿದ್ದು, ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಚಿತ್ರ ಬಿಡುಗಡೆಗೂ ಮುನ್ನವೇ ಲೀಕ್ ಆಗಿದ್ದಾಗಿ ಮಾತುಗಳು ಕೇಳಿ ಬಂದಿದ್ದವು.

ಇದಕ್ಕೆ ಪೂರಕವೆಂಬಂತೆ ಕೆಲವು ವೆಬ್ ಸೈಟ್ ಗಳಲ್ಲಿ ‘ಕಬಾಲಿ’ ಚಿತ್ರದಲ್ಲಿ ರಜನಿಕಾಂತ್ ಎಂಟ್ರಿ ಕೊಡುವ ದೃಶ್ಯಾವಳಿ ಹರಿದಾಡುತ್ತಿದೆ. ಇದು ಚಿತ್ರದ ನೈಜ ದೃಶ್ಯವೋ ಅಥವಾ ನಕಲಿಯೋ ಎಂಬುದು ಚಿತ್ರ ಬಿಡುಗಡೆಯ ಬಳಿಕವಷ್ಟೇ ಗೊತ್ತಾಗಬೇಕಿದೆ.

ಈ ಮಧ್ಯೆ ಇದಕ್ಕೆ ಸ್ಪಷ್ಠೀಕರಣ ನೀಡಿರುವ ‘ಕಬಾಲಿ’ ನಿರ್ಮಾಪಕ ಕಲೈಪುಲಿ ಎಸ್. ಧನು, ಚಿತ್ರ ಬಿಡುಗಡೆಗೂ ಮೊದಲೇ ಬಹಿರಂಗವಾಗಿದೆ ಎಂಬುದು ಕೇವಲ ವದಂತಿ. ನಾವು ಈಗಾಗಲೇ ಪೈರಸಿ ಸೈಟ್ ಗಳನ್ನು ಬ್ಲಾಕ್ ಮಾಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಶುಕ್ರವಾರದಂದು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ‘ಕಬಾಲಿ’ ಬಿಡುಗಡೆಯಾಗುತ್ತಿದ್ದು, ಪ. ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್, ರಾಧಿಕಾ ಆಪ್ಟೆ ಮುಖ್ಯ ಭೂಮಿಕೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...