alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾಳೆ ರಾಖಿ ಸಾವಂತ್

‘Modi’ dress of Rakhi Sawant will now feed poor children!ಬಾಲಿವುಡ್ ನಲ್ಲಿ ಚಿತ್ರಗಳಿಗಿಂತ ಜಾಸ್ತಿ ವಿವಾದಾತ್ಮಕ ನಡೆಗಳಿಂದಲೇ ಹೆಸರುವಾಸಿಯಾಗಿರುವ ನಟಿ ರಾಖಿ ಸಾವಂತ್, ಅಮೆರಿಕಾದ ಅನಿವಾಸಿ ಭಾರತೀಯರ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೆಕ್ಸಿ ಡ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿಕೊಂಡಿದ್ದ ಕಾರಣಕ್ಕೆ ವಿವಾದಕ್ಕೆ ಕಾರಣಳಾಗಿದ್ದಳು.

ಇದೀಗ ತನ್ನ ಡ್ರೆಸ್ ಕುರಿತು ಭಾರತದಲ್ಲಿ ತೀವ್ರ ಟೀಕೆ ಕೇಳಿ ಬರುತ್ತಿದ್ದಂತೆಯೇ ಆದಕ್ಕೆ ಉತ್ತರ ನೀಡಿರುವ ರಾಖಿ ಸಾವಂತ್, ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಗೌರವಿಸುತ್ತೇನೆ. ಭಾರತದಲ್ಲಿ ನಡೆಯುತ್ತಿರುವ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಚರ್ಚಿಸುವುದನ್ನು ಬಿಟ್ಟು ನನ್ನ ಡ್ರೆಸ್ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಕೈ ಬಿಡಿ ಎಂದಿದ್ದಾಳೆ ರಾಖಿ.

ಅಲ್ಲದೇ ಈ ಸಮಾರಂಭದಲ್ಲಿ ತಾನು ಧರಿಸಿದ್ದ ಡ್ರೆಸ್ ಅನ್ನು ಹರಾಜು ಮಾಡುವುದಾಗಿ ಘೋಷಿಸಿರುವ ರಾಖಿ ಸಾವಂತ್, ಅದರಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳುವುದಾಗಿ ತಿಳಿಸಿದ್ದಾಳೆ. ಆದರೆ ರಾಖಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ್ದಾಳೆಂದು ಆಕ್ರೋಶಗೊಂಡಿರುವ ಸ್ವಯಂ ಸೇವಾ ಸಂಸ್ಥೆಯೊಂದು ಆಕೆಯ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...