alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ್ ಟಾಯ್ಲೆಟ್ ಗೆ ಇನ್ನೊಂದು ಸಂಕಷ್ಟ

toilet-1

ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್-ಏಕ್ ಪ್ರೇಮ ಕಥಾ ಚಿತ್ರತಂಡಕ್ಕೆ ಇನ್ನೊಂದು ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬಳ ಜೀವನ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ. ಈಗ ಆ ಮಹಿಳೆ ಚಿತ್ರದ ಲಾಭದಲ್ಲಿ ಒಂದು ಪಾಲು ಕೊಡುವಂತೆ ಬೇಡಿಕೆಯಿಟ್ಟಿದ್ದಾಳೆ.

ಕೆಲ ದಿನಗಳ ಹಿಂದೆ ಚಿತ್ರ ನಿರ್ದೇಶಕ ನಾರಾಯಣ್ ಸಿಂಹ್ ಹಾಗೂ ಭೂಮಿ ಪಡ್ನೇಕರ್ ಮಧ್ಯಪ್ರದೇಶದ ಬೈತುಲ್ ಗೆ ಹೋಗಿ ಅನಿತಾ ನರ್ರೆ ಜೊತೆ ಮಾತುಕತೆ ನಡೆಸಿದ್ದರು. ನಿರ್ದೇಶಕರು ಅನಿತಾ ಜೊತೆ ಒಪ್ಪಂದದ ಮಾತುಕತೆ ನಡೆಸಿದ್ದರು. 5 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ನಿರ್ದೇಶಕರು ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿದ್ದರು.

ಈ ವೇಳೆ ಸ್ವಲ್ಪ ಸಮಯ ಕೇಳಿದ್ದ ಅನಿತಾ ಈಗ ದೊಡ್ಡ ಬೇಡಿಕೆಯಿಟ್ಟಿದ್ದಾರೆ. ಚಿತ್ರ ಗಳಿಸಿರುವ ಮೊತ್ತದಲ್ಲಿ ಒಂದು ಪಾಲನ್ನು ತಮಗೆ ನೀಡಬೇಕು ಎಂದಿದ್ದಾರೆ. ಆಗ ಮಾತ್ರ ಕರಾರಿಗೆ ಸಹಿ ಹಾಕುವುದಾಗಿ ತಿಳಿಸಿದ್ದಾರೆ.

ಚಿತ್ರ ನಿರ್ಮಾಣದ ವೇಳೆ ಅನಿತಾ ಎಂಬ ಮಹಿಳೆ ಇದ್ದಾರೆ ಎಂಬುದೇ ನಮಗೆ ತಿಳಿದಿರಲಿಲ್ಲ. ಅವಳ ಕಥೆಯೂ ಹೀಗೆ ಇದೆ ಎಂಬುದು ತಿಳಿದ ನಂತ್ರ ಅನಿತಾ ಭೇಟಿ ಮಾಡಿ ಹಣ ನೀಡುವುದಾಗಿ ಹೇಳಿದ್ದೆವು. ಆದ್ರೆ ಅನಿತಾ ಈಗ ಮಾತು ಬದಲಿಸುತ್ತಿದ್ದಾರೆಂದು ನಿರ್ದೇಶಕರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...