alex Certify
ಕನ್ನಡ ದುನಿಯಾ       Mobile App
       

Kannada Duniya

ಮಾವನ ಜೊತೆ ಮದ್ಯ ಕುಡಿದು ಹುಕ್ಕಾ ಎಂಜಾಯ್ ಮಾಡಿದ ನಟಿ

ಯೇ ಹೇ ಮೊಹಬ್ಬತೇ ಧಾರಾವಾಹಿ ನಟಿ ಅನಿತಾ ಹಸನಂದಾನಿ ಏಪ್ರಿಲ್ 14ರಂದು 37ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಅನಿತಾ ತನ್ನ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಕೊಂಡಿದ್ದಾಳೆ. ಹುಟ್ಟುಹಬ್ಬದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಒಂದು ಫೋಟೋದಲ್ಲಿ ಅನಿತಾ ಹುಕ್ಕಾ ಸೇದುತ್ತಿದ್ದರೆ ಇನ್ನೊಂದರಲ್ಲಿ ಮಾವನ ಜೊತೆ ಮದ್ಯ ಸೇವನೆ ಮಾಡ್ತಿದ್ದಾಳೆ. ಅನಿತಾ ಮಾವ ನಿವೃತ್ತ ಸೇನಾಧಿಕಾರಿಯಾಗಿದ್ದು ಸೊಸೆ ಜೊತೆ ಆಪ್ತರಾಗಿದ್ದಾರೆ. ಅನಿತಾ ಪತಿ ರೋಹಿತ್ ಬ್ಯುಸಿನೆಸ್ ಮ್ಯಾನ್ ಆಗಿದ್ದು 2013ರಲ್ಲಿ ಅನಿತಾ ರೋಹಿತ್ ಮದುವೆ ನಡೆದಿತ್ತು.

ಜಿಮ್ ನಲ್ಲಿ ಮೊದಲು ಇಬ್ಬರ ಭೇಟಿಯಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನಿತಾ ಧಾರಾವಾಹಿಯಲ್ಲೊಂದೇ ಅಲ್ಲ ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿದ್ದಾಳೆ. 2015ರಲ್ಲಿ ಬಂದ ಹಿರೋದಲ್ಲಿ ಅನಿತಾ ಕಾಣಿಸಿಕೊಂಡಿದ್ದಳು. ಇದಕ್ಕೂ ಮುನ್ನ ಕುಚ್ ತೋ ಹೇ, ಯೇ ದಿಲ್, ಕೃಷ್ಣ ಕಾಟೇಜ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...