alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ಹರ್ಷವರ್ದನ್ ಬ್ರೇಕ್ ಅಪ್ ಗೆ ತಂದೆ ಅನಿಲ್ ಕಪೂರ್ ಕಾರಣ..?

harsh

ಎವರ್ ಗ್ರೀನ್ ನಟ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ನಂತರ ಮಗ ಹರ್ಷವರ್ದನ್ ಕಪೂರ್ ಬಾಲಿವುಡ್ ಗೆ ಎಂಟ್ರಿ ಪಡೆಯುತ್ತಿದ್ದಾನೆ. ಓಂ ಪ್ರಕಾಶ್ ನಿರ್ದೇಶನದ ಚೊಚ್ಚಲ ಚಿತ್ರ ಮಿರ್ಜಿಯಾ ಚಿತ್ರದಲ್ಲಿ ಹರ್ಷ ಕಪೂರ್ ಹಾಗೂ ಸಯಾಮಿ ಮಿರ್ಜಿಯಾ ನಟಿಸಲಿದ್ದಾರೆ. ಆದ್ರೆ ವಿಷ್ಯ ಇದಲ್ಲ.

ಹರ್ಷವರ್ದನ್ ರಿಯಲ್ ಲೈಫ್ ನಲ್ಲಿ ತನ್ನ ಪ್ರೇಯಸಿ ಸ್ವಪ್ನಾ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದಾನೆ. ಹರ್ಷವರ್ದನ್ ಬ್ರೇಕ್ ಅಪ್ ಗೆ ತಂದೆ ಅನಿಲ್ ಕಪೂರ್ ಕಾರಣ ಎನ್ನಲಾಗ್ತಾ ಇದೆ. ಸ್ವಪ್ನಾ, ಅನಿಲ್ ಕಪೂರ್ ಸೀರಿಯಲ್ 24 ನಲ್ಲಿ ಮಗಳ ಪಾತ್ರ ನಿಭಾಯಿಸಿದ್ದಳು. ಅನಿಲ್ ಕಪೂರ್ ಕುಟುಂಬದ ಜೊತೆ ಸ್ವಪ್ನಾ ಒಳ್ಳೆ ಸಂಬಂಧ ಹೊಂದಿದ್ದಾಳೆ.

ಆದ್ರೆ ಇಷ್ಟು ಬೇಗ ಮಗ ರಿಲೇಷನ್ ಶಿಪ್ ನಲ್ಲಿರುವುದು ಅನಿಲ್ ಕಪೂರ್ ಕುಟುಂಬಕ್ಕೆ ಇಷ್ಟವಿಲ್ಲವಂತೆ. ಮೊದಲು ಬದುಕು ಆರಂಭವಾಗಲಿ. ವೃತ್ತಿ ಜೀವನದ ಆರಂಭದಲ್ಲಿಯೇ ವಿವಾದಗಳು ಬೆನ್ನಿಗೆ ಅಂಟಿಕೊಳ್ಳುವುದು ಬೇಡ ಎಂಬುದು ಅನಿಲ್ ಕಪೂರ್ ಹಾಗೂ ಸಹೋದರಿ ಸೋನಂ ಕಪೂರ್ ಆಶಯ. ಹಾಗಾಗಿ ಹರ್ಷವರ್ದನ್ ಹಾಗೂ ಸ್ವಪ್ನಾ ಬ್ರೇಕ್ ಅಪ್ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...