alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿಕ್ ಬೆಡಗಿ ಜೊತೆ ಬಾಲಿವುಡ್ ನಟನ ಬಿಂದಾಸ್ ಸ್ಟೆಪ್

ದಕ್ಷಿಣ ಭಾರತದ ಚಿತ್ರವೊಂದರಿಂದ ತಮ್ಮ ಸಿನಿಮಾ ಬದುಕು ಆರಂಭಿಸಿದ ಅನಿಲ್‌ ಕಪೂರ್‌, ಕಿರಿಕ್‌ ಚೆಲುವೆ ರಶ್ಮಿಕಾ ಮಂದಣ್ಣ ಜತೆ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್‌ ಮಾಡುವಂತೆ ಬಂದ ಕೋರಿಕೆಗೆ ಅನಿಲ್‌, ಕನ್ನಡ ಹಾಡು, ರಶ್ಮಿಕಾ ವೇದಿಕೆ ಮೇಲೆ ಬಂದರೆ ನೃತ್ಯ ಮಾಡುವುದಾಗಿ ಷರತ್ತು ಹಾಕಿದ್ದಾರೆ. ಬಾಲಿವುಡ್‌ ನಟನ ಬೇಡಿಕೆಗೆ ಇಲ್ಲ ಅನ್ನುವವರಾರು. ಅವರ ಬೇಡಿಕೆ ಕ್ಷಣಾರ್ಧದಲ್ಲಿ ಈಡೇರಿದೆ.

ಕನ್ನಡ ಹಾಡು ಅಂದಾಕ್ಷಣ ಅನಿಲ್ ಕಪೂರ್ ಅಭಿನಯದ ಹಳೆ ಸಿನಿಮಾ ಹಾಡಲ್ಲ. ಇತ್ತೀಚೆಗೆ ಬಿಗ್‌ಬಾಸ್‌ನಿಂದ ಫೇಮಸ್‌ ಆಗಿರುವ ಚಂದನ್ ಶೆಟ್ಟಿ ಅವರ ಮೂರು ಪೆಗ್‌ಗೆ ತಲೆ ಗಿರ ಗಿರ…. ರಾಪ್‌ ಸಾಂಗ್‌ ಗೆ ಹೆಜ್ಜೆ ಹಾಕಿದ್ದಾರೆ.

ಅಂತೆಯೇ ಹಾಡಿಗೆ ಸರಿಯಾಗಿ ಅನಿಲ್‌ ಕಪೂರ್‌ ಹೆಜ್ಜೆ ಹಾಕಿದ್ದಕ್ಕೆ, ಸಿಳ್ಳೆ ಮಹಾಪೂರವೇ ಹರಿದಿದೆ. ಅನಿಲ್‌ ಕಪೂರ್‌ ಜತೆ ಹೆಜ್ಜೆ ಹಾಕಿದ ಕ್ಷಣವನ್ನು ರಶ್ಮಿಕಾ ಇನ್‌ಸ್ಟಾಗ್ರಾಂ ಸೇರಿ ಸಾಮಾಜಿಕ ತಾಣಗಳಲ್ಲಿ ಬರೆದು, ಖುಷಿ ಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...