alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕಾಗಿ ಎಟಿಎಂ ಎದುರು ಕ್ಯೂ ನಿಂತಿದ್ದ ಬಾಲಿವುಡ್ ಸ್ಟಾರ್

anil-kapoor

ಇವತ್ತು ಎಲ್ಲರಿಗೂ ಸಂಬಳದ ದಿನ, ಆದ್ರೆ ಎಟಿಎಂ ಬರಿದಾಗಿದೆ, ಬ್ಯಾಂಕ್ ನಲ್ಲೂ ಹಣ ಸಿಕ್ತಾ ಇಲ್ಲ. ಇದು ಕೇವನ ಜನಸಾಮಾನ್ಯರ ಪಾಡಲ್ಲ, ಸೆಲೆಬ್ರಿಟಿಗಳಿಗೂ ಆರ್ಥಿಕ ಮುಗ್ಗಟ್ಟು ಶುರುವಾಗಿದೆ. ಇವತ್ತು ಮುಂಬೈನಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ಹಣಕ್ಕಾಗಿ ಎಟಿಎಂ ಎದುರು ಕ್ಯೂ ನಿಂತಿದ್ರು.

ಹೋಟೆಲ್ ಲಾಬಿಯಲ್ಲಿದ್ದ ಎಟಿಎಂ ಮಷಿನ್ ನಲ್ಲಿ ಹಣ ಸಿಗಬಹುದೇನೋ ಅಂತಾ ಎಲ್ರೂ ಕಾತರದಿಂದ ಕಾಯ್ತಾ ಇದ್ರೆ, ಅನಿಲ್ ಕಪೂರ್ ಕೂಡ ತಮ್ಮ ಅದೃಷ್ಟ ಪರೀಕ್ಷೆಗಾಗಿ ಸರತಿ ಸಾಲಲ್ಲಿ ನಿಂತಿದ್ದರು.

ಕೆಲ ದಿನಗಳ ಹಿಂದಷ್ಟೆ ತೆಲಗು ನಟ ರವಿಬಾಬು ತಮ್ಮ ಹಂದಿ ಮರಿ ಜೊತೆ ಹೈದ್ರಾಬಾದ್ ನಲ್ಲಿ ಎಟಿಎಂಗೆ ಬಂದಿದ್ರು. ಇನ್ನು ನಟಿ ವಿದ್ಯಾ ಬಾಲನ್ ಅವರಿಗಂತೂ ಎಟಿಎಂ ಎದುರು ಕ್ಯೂ ನಿಲ್ಲಬೇಕಾದ ಅನಿವಾರ್ಯತೆಯೇ ಇಲ್ವಂತೆ. ಹಾಗಂತ ಅವರತ್ತ ನೂರರ ನೋಟು ಸಿಕ್ಕಾಪಟ್ಟೆ ಇರಬೇಕು ಅಂದ್ಕೋಬೇಡಿ. ಸದ್ಯ ವಿದ್ಯಾ ಬಾಲನ್ ‘ಕಹಾನಿ-2’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರೋದ್ರಿಂದ ಅವರ ಖರ್ಚು ವೆಚ್ಚವನ್ನೆಲ್ಲ ಚಿತ್ರತಂಡ ನೋಡಿಕೊಳ್ತಿದೆ. ಹಾಗಾಗಿ ವಿದ್ಯಾ ಹಣಕ್ಕಾಗಿ ಬ್ಯಾಂಕ್ ಅಥವಾ ಎಟಿಎಂ ಗೆ ಹೋಗಬೇಕಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...