alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ವರ್ಯಾ ರೈ ಪುತ್ರನೆಂದು ಹೇಳಿಕೊಂಡವನಿಗೆ ‘ಸಂಕಷ್ಟ’

ತಾನು ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಪುತ್ರನೆಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದ ಯುವಕನಿಗೆ ಈಗ ಸಂಕಷ್ಟ ಬಂದೊದಗಿದೆ. ತಮಗೆ ಅಧಿಕೃತವಾಗಿ ಸಂಬಂಧಪಟ್ಟವರಿಂದ ದೂರು ದಾಖಲಾದರೆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನ ಚೋಡಾವರಂ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಿಳಿಸಿದ್ದಾರೆ.

ಕಳೆದ ವಾರ, ಆಂಧ್ರ ಪ್ರದೇಶದ ಆದಿರೆಡ್ಡಿ ಸಂದೀಪ್ ಕುಮಾರ್ ಎಂಬಾತ ತಾನು ಬಾಲಿವುಡ್ ನಟಿ ಐಶ್ವರ್ಯಾ ರೈ ಪುತ್ರನೆಂದು ಹೇಳಿಕೊಂಡಿದ್ದನಲ್ಲದೇ 1998 ರಲ್ಲಿ ಐವಿಎಫ್ ಚಿಕಿತ್ಸೆ ಮೂಲಕ ತಾನು ಐಶ್ವರ್ಯಾ ರೈಗೆ ಜನಿಸಿದ್ದು, ಎರಡು ವರ್ಷಗಳ ಕಾಲ ಐರ್ಶರ್ಯಾ ಪೋಷಕರೇ ಸಾಕಿದ್ದಾಗಿ ಹೇಳಿಕೊಂಡಿದ್ದ. ಅಲ್ಲದೇ ತಾನು ತಾಯಿ ಐಶ್ವರ್ಯಾ ಜೊತೆ ಮಂಗಳೂರಿನಲ್ಲಿ ನೆಲೆಸಲು ಬಯಸುವುದಾಗಿ ತಿಳಿಸಿದ್ದ.

ಈ ವಿಚಾರ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲೂ ಪ್ರಕಟಗೊಂಡಿದ್ದು, ಆದರೆ ಐಶ್ವರ್ಯಾ ರೈ ಇಂತಹ ಹುಚ್ಚಾಟದ ಹೇಳಿಕೆಗೆ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ವೈಜಾಗ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಅಧಿಕೃತವಾಗಿ ದೂರು ದಾಖಲಾದರೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಆದಿರೆಡ್ಡಿ ಸಂದೀಪ್ ಕುಮಾರ್ ಈ ಹಿಂದೆ ತಾನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಶಿಷ್ಯನೆಂದು ಹೇಳಿಕೊಂಡಿರುವ ಮಾಹಿತಿಯೂ ಲಭಿಸಿದೆ ಎಂದಿದ್ದಾರೆ. ಆದರೆ ಆದಿರೆಡ್ಡಿ ಸಂದೀಪ್ ರೆಡ್ಡಿ ಮಾನಸಿಕ ಅಸ್ವಸ್ಥನಾ ಎಂಬ ಸಂಶಯವೂ ಕಾಡುತ್ತಿದ್ದು, ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯಾಂಶ ಹೊರ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...