alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಘಟನೆಯಿಂದ ನಟಿ ಅನನ್ಯ ಪಾರು

ನಟ ಚಂಕಿ ಪಾಂಡೆ ಮಗಳು ಅನನ್ಯ ಪಾಂಡೆ ‘ಸ್ಟೂಡೆಂಟ್ ಆಫ್ ದ ಇಯರ್-2’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾಳೆ. ಸದ್ಯ ಮನ್ಸೂರಿಯಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಅನನ್ಯ ಬ್ಯುಸಿಯಿದ್ದಾಳೆ. ಡಿ ಎನ್ ಎ ವರದಿ ಪ್ರಕಾರ ಅನನ್ಯ ಶೂಟಿಂಗ್ ಸೆಟ್ ನಲ್ಲಿ ದುರ್ಘಟನೆಯೊಂದು ನಡೆದಿದೆ. ಅದೃಷ್ಟವಶಾತ್ ಅನನ್ಯಾಳಿಗೆ ಯಾವುದೇ ಹಾನಿಯಾಗಿಲ್ಲವೆಂದು ಮೂಲಗಳು ಹೇಳಿವೆ.

ದೃಶ್ಯವೊಂದರಲ್ಲಿ ಅನನ್ಯ ವಾಹನ ಚಲಾಯಿಸಬೇಕಿತ್ತು. ವಾಹನ ಚಲಾಯಿಸ್ತಿದ್ದ ಅನನ್ಯ ಕಂಟ್ರೋಲ್ ತಪ್ಪಿ ಮರಕ್ಕೆ ಗುದ್ದಿದ್ದಾಳೆ. ಅನನ್ಯಗೆ ಡ್ರೈವಿಂಗ್ ಸರಿಯಾಗಿ ಬರುತ್ತಂತೆ. ಆದ್ರೆ ಯಾಕೆ ಹೀಗಾಯ್ತು ಅನ್ನೋದು ಗೊತ್ತಾಗಿಲ್ಲ. ಶೂಟಿಂಗ್ ವೇಳೆ ನಡೆದ ಘಟನೆಗೆ ಎಲ್ಲರೂ ಆತಂಕಗೊಂಡಿದ್ದರಂತೆ.

ಅನನ್ಯಗೆ ಯಾವುದೇ ಗಾಯಗಳಾಗಿಲ್ಲ. ಈಗ ವಿಶೇಷ ತಂಡ ಎಲ್ಲರ ಮೇಲೆ ಕಣ್ಣಿಟ್ಟಿದೆಯಂತೆ. ಕರಣ್ ಜೋಹರ್ ಚಿತ್ರ ಸ್ಟೂಡೆಂಟ್ ಆಫ್ ದ ಇಯರ್ ನಲ್ಲಿ ಟೈಗರ್ ಶ್ರಾಫ್, ತಾರಾ ಸುತಾರಿಯಾ ಜೊತೆ ಅನನ್ಯಾ ಕಾಣಿಸಿಕೊಳ್ಳಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...