alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನಂತ ನಾಗ್

ಸ್ಯಾಂಡಲ್ ವುಡ್ ಕಂಡ ಅಪ್ರತಿಮ ನಟ ಅನಂತನಾಗ್ ಅವರಿಗೆ ಹೊನ್ನಾವರ ಎಂದರೆ ಬಹು ಪ್ರೀತಿಯಂತೆ. ಅಲ್ಲಿ ಕಳೆದ ದಿನಗಳನ್ನು ತಮ್ಮ ಜೀವನದ ಅಮೂಲ್ಯ ಕ್ಷಣಗಳು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಬಾಲ್ಯದ ನೆನಪಿನ ಬುತ್ತಿ ಬಿಚ್ಚಿಡುವಾಗ ಹೊನ್ನಾವರದ ಶಾಲಾ ದಿನಗಳನ್ನು ನೆನಪಿಸಿಕೊಂಡಿರುವ ಅವರು, ನಾನು ಹೊನ್ನಾವರದಲ್ಲಿ ಕಳೆದ ಕ್ಷಣಗಳು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಓದಿಗಾಗಿ ತಮ್ಮ ತಂದೆ ಮನೆಯಿಂದ 16 ಕಿ.ಮೀ. ದೂರದಲ್ಲಿದ್ದ ಹೊನ್ನಾವರದಲ್ಲಿ ಬಾಡಿಗೆ ಮನೆಯಲ್ಲಿ ಬಿಟ್ಟಿದ್ದರು.

ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ನಾನು, ತರಗತಿಯಲ್ಲಿ ಟಾಪ್ 5 ರ್ಯಾಂಕ್ ನಲ್ಲಿ ಇರುತ್ತಿದ್ದೆ. ಇದರೊಂದಿಗೆ ಶಾಲೆಯಲ್ಲಿದ್ದ ಎಸಿಸಿ, ಎನ್ಸಿಸಿ ಘಟಕಗಳಿಗೆ ಸೇರಿ, ಇದರೊಂದಿಗೆ ದೇಶಭಕ್ತಿ‌ ಹಾಗೂ ಸೇವೆಯ ಬಗ್ಗೆ ತಿಳಿದುಕೊಂಡೆ. ಇಲ್ಲಿರುವಾಗಲೇ ನಾನು ಶಿಸ್ತು ಹಾಗೂ ಕಠಿಣ ಶ್ರಮದ ಬಗ್ಗೆ ಕಲಿತೆ‌ ಎಂದಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ‌ ಹೊನ್ನಾವರದಿಂದ ಮುಂಬಯಿಗೆ ಹೋದ ಬಳಿಕ ನನ್ನ ಜೀವನವೇ ಬದಲಾಯಿತು. ಅಲ್ಲಿ ಬೇರೊಂದು ಪ್ರಪಂಚವಿತ್ತು‌. ಸಿನಿಮಾ‌ ನಟರು, ಸಿನಿಮಾ ಇದೇ ಆಗಿತ್ತು. ಇದರೊಂದಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದರಿಂದ, ಹೊನ್ನಾವರದಲ್ಲಿ ಟಾಪ್ 5ನಲ್ಲಿ ಇದ್ದ ನಾನು, ಮುಂಬಯಿ ಶಾಲೆಯಲ್ಲಿ ಕೊನೆಯ 5 ರ್ಯಾಂಕ್ ನಲ್ಲಿ ಇರುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...