alex Certify
ಕನ್ನಡ ದುನಿಯಾ       Mobile App
       

Kannada Duniya

‘ಮುಗುಳು ನಗೆ’ ಚಿತ್ರದಿಂದ ಅಮೂಲ್ಯ ಔಟ್

amulya

ಸ್ಯಾಂಡಲ್ವುಡ್ ತಾರೆ ಅಮೂಲ್ಯ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೆ ನೆರವೇರಿದೆ. ಜಗದೀಶ್ ಆರ್ ಚಂದ್ರ ಜೊತೆ ಅಮೂಲ್ಯ ಉಂಗುರ ಬದಲಾಯಿಸಿಕೊಂಡಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಚಿತ್ರದ ನಂತರ ಗಣೇಶ್ ಅಭಿನಯದ ‘ಮುಗುಳು ನಗೆ’ ಸಿನೆಮಾದಲ್ಲೂ ಅಮೂಲ್ಯ ನಟಿಸಬೇಕಿತ್ತು. ಆದ್ರೆ ‘ಮುಗುಳು ನಗೆ’ ಚಿತ್ರದಿಂದ ಅಮೂಲ್ಯ ಅವರನ್ನು ಕೈಬಿಡಲಾಗಿದೆ.

25 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅಮೂಲ್ಯ ಅವರನ್ನು ಚಿತ್ರದಿಂದ್ಲೇ ಕೈಬಿಡಲಾಗಿದೆ ಅನ್ನೋ ಮಾಹಿತಿ ಇದೆ. ಅಮೂಲ್ಯ ಬದಲು ‘ಮುಗುಳು ನಗೆ’ ಸಿನೆಮಾದಲ್ಲಿ ಅಪೂರ್ವ ಅರೋರಾ ನಟಿಸಲಿದ್ದಾರೆ.

ಅವರು ಈ ಹಿಂದೆ ‘ಸಿದ್ದಾರ್ಥ’ ಚಿತ್ರದಲ್ಲಿ ಅಭಿನಯಿಸಿದ್ದರು. ಯೋಗರಾಜ್ ಭಟ್ ನಿರ್ದೇಶನದ ಮುಗುಳು ನಗೆ ಚಿತ್ರದಲ್ಲಿ ಆಶಿಕಾ ರಂಗನಾಥ್ ಮತ್ತು ನಿಖಿತಾ ನಾರಾಯಣ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...