alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿ ಕಪೂರ್ ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ ಅಮುಲ್

ಬಾಲಿವುಡ್ ನ ಹಿರಿಯ ನಟ ಶಶಿ ಕಪೂರ್ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. 116 ಚಿತ್ರಗಳಲ್ಲಿ ಅಭಿನಯಿಸಿದ್ದ ಶಶಿ ಕಪೂರ್, ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ಚಾರ್ಮಿಂಗ್ ಲುಕ್, ಪವರ್ ಫುಲ್ ಡೈಲಾಗ್ ಗಳು ಇಂದಿಗೂ ಅಭಿಮಾನಿಗಳ ಫೇವರಿಟ್.

70-80ರ ದಶಕದಲ್ಲಂತೂ ಶಶಿ ಕಪೂರ್ ಬಾಲಿವುಡ್ ನ ಸೂಪರ್ ಸ್ಟಾರ್ ಆಗಿದ್ದರು. 1998ರಲ್ಲಿ ಅವರು ನಟನೆಯಿಂದ ನಿವೃತ್ತಿ ಪಡೆದಿದ್ದಾರೆ. ಕಳೆದ ಕೆಲವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶಶಿಕಪೂರ್, ಲಿವರ್ ಸಿರೋಸಿಸ್ ಖಾಯಿಲೆಯಿಂದ ಬಳಲುತ್ತಿದ್ದರು.

ಡಿಸೆಂಬರ್ 4ರಂದು ಚೆಸ್ಟ್ ಇನ್ಫೆಕ್ಷನ್ ನಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಬಾಲಿವುಡ್ ನ ಕಲಾವಿದರೆಲ್ಲ ಅಗಲಿದ ಹಿರಿಯ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಮುಲ್ ಕಂಪನಿ ಕೂಡ ಶಶಿ ಕಪೂರ್ ಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಮರ್ಪಿಸಿದೆ.

‘ಮೇರೆ ಪಾಸ್ ಮಾ ಹೈ’ ಎಂಬ ಶಶಿ ಕಪೂರ್ ಅವರ ಫೇಮಸ್ ಡೈಲಾಗ್ ಅನ್ನಿಟ್ಟುಕೊಂಡು ಟ್ವಿಟ್ಟರ್ ನಲ್ಲಿ ‘ಮೇರೆ ಪಾಸ್ ಆಪ್ ಕಾ ಸಿನೆಮಾ ಹೈ’ ಎಂಬ ಟ್ಯಾಗ್ ಲೈನ್ ಉಳ್ಳ ಫೋಟೋವನ್ನು ಪೋಸ್ಟ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...