alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಜೊತೆ ಡಾನ್ಸ್ ಮಾಡಿದ ಸಿಎಂ ಪತ್ನಿ

big-b_b9xdcru

ಮಹಾರಾಷ್ಟ್ರದ ಸಿಎಂ ದೇವೆಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಶೀಘ್ರದಲ್ಲಿಯೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಬ್ ಜೊತೆ ಅಮೃತಾ ವಿಡಿಯೋ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡಿನ ಚಿತ್ರೀಕರಣ ಪೂರ್ಣಗೊಂಡಿದ್ದು, ಫೋಟೋ ವೈರಲ್ ಆಗಿದೆ.

ನಿರ್ದೇಶಕ ಅಹ್ಮದ್ ಖಾನ್  ಫಿರ್ ಸೇ ಹೆಸರಿನ ವಿಡಿಯೋ ಸಾಂಗ್ ನಿರ್ದೇಶಿಸಿದ್ದಾರೆ. ಅಮೃತಾ ಕೇವಲ ಉತ್ತಮ ಗಾಯಕಿ ಮಾತ್ರವಲ್ಲ, ಸುಂದರ ಹಾಗೂ ಬುದ್ಧಿವಂತ ನಟಿ. ಒಪೇರಾ ಹೌಸ್ ಶೂಟಿಂಗ್ ವೇಳೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಯ್ತು. ಅಲ್ಲಿ ದುಬಾರಿ ಕಲಾಕೃತಿಗಳ ಸಂಖ್ಯೆ ಜಾಸ್ತಿ ಇತ್ತು ಎಂದಿದ್ದಾರೆ ನಿರ್ದೇಶಕರು.

ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಶೂಟಿಂಗ್ ನಡೆದಿದೆ. ಭೂಷಣ್ ಕುಮಾರ್ ಈ ವಿಡಿಯೋ ನಿರ್ಮಾಣ ಮಾಡಿದ್ದಾರೆ. ಕೆಂಪು ಬಣ್ಣದ ಉಡುಗೆ ಜೊತೆ ಹಿಲ್ಡ್ ತೊಟ್ಟಿದ್ದ ಅಮೃತ ತುಂಬಾ ಹಾಟ್ ಆಗಿ ಕಾಣ್ತಿದ್ದರು. ಈ ವಿಡಿಯೋ ಹಾಡಿನಲ್ಲಿ ಅಮೃತಾ ಹಾಗೂ ಅಮಿತಾಬ್ ಧ್ವನಿಯನ್ನು ಪ್ರೇಕ್ಷಕರು ಕೇಳಬಹುದಾಗಿದೆ.

ಗೋಪಿನಾಥ್ ಮುಂಡೆ ಜೀವನಾಧಾರಿತ ಮರಾಠಿ ಚಿತ್ರವೊಂದಕ್ಕೆ ಮೊದಲ ಬಾರಿ ಧ್ವನಿ ನೀಡಿದ್ದರು ಅಮೃತಾ. ಒಳ್ಳೆ ತಾಯಿ, ಪತ್ನಿ ಜೊತೆಗೆ ಉತ್ತಮ ಗಾಯಕಿ ಕೂಡ ಹೌದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...