alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಿ’ ಗೆ ಸಿಕ್ಕಿತ್ತಾ ಶ್ರೀದೇವಿ ಸಾವಿನ ಮುನ್ಸೂಚನೆ…?

ಖ್ಯಾತ ನಟಿ ಶ್ರೀದೇವಿಯರ ಹಠಾತ್ ಸಾವು ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವನ್ನು ದಿಗ್ಬ್ರಮೆಗೊಳಿಸಿದೆ. ದುಬೈಗೆ ಸಂಬಂಧಿಯ ಮದುವೆಗೆಂದು ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಕಪೂರ್ ಜೊತೆ ತೆರಳಿದ್ದ 54 ವರ್ಷದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಬಾರದ ಲೋಕಕ್ಕೆ ತೆರಳಿದ್ದಾರೆ.

ಶ್ರೀದೇವಿಯವರ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದು, ಶೋಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಶ್ರೀದೇವಿಯವರ ಸಾವಿಗೂ ಕೆಲ ಕ್ಷಣದ ಮುನ್ನ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮಾಡಿದ್ದ ಟ್ವೀಟ್ ಒಂದು ತೀವ್ರ ಚರ್ಚೆಗೆ ಕಾರಣವಾಗಿದೆ.

ಶ್ರೀದೇವಿಯವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಬಿಗ್ ಬಿ, ”ಯಾಕೋ ಗೊತ್ತಾಗುತ್ತಿಲ್ಲ. ಒಂದು ರೀತಿಯ ತಳಮಳವುಂಟಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದು, ಕೆಲ ಹೊತ್ತಿನಲ್ಲೇ ಶ್ರೀದೇವಿಯವರ ಸಾವಿನ ಸುದ್ದಿ ಹೊರ ಬಿದ್ದಿದೆ. ಮೊದಲಿಗೆ ಶ್ರೀದೇವಿಯವರ ಸಾವಿನ ಸುದ್ದಿ ತಿಳಿದು ಅಮಿತಾಬ್ ಬಚ್ಚನ್ ಈ ಟ್ವೀಟ್ ಮಾಡಿದ್ದರೆಂದು ಕೆಲವರು ಹೇಳುತ್ತಿದ್ದರೆ ಮತ್ತಷ್ಟು ಮಂದಿ ಶ್ರೀದೇವಿ ಸಾವಿಗೂ ಮುನ್ನ ಬಿಗ್ ಬಿ ಈ ಟ್ವೀಟ್ ಮಾಡಿದ್ದು, ಅವರಿಗೆ ಚಿತ್ರರಂಗದ ಖ್ಯಾತ ನಟಿಯ ಸಾವಿನ ಮುನ್ಸೂಚನೆ ಸಿಕ್ಕಿರಬಹುದು ಎಂದಿದ್ದಾರೆ. ಮತ್ತಷ್ಟು ಮಂದಿ ‘ಬಿಗ್ ಬಿ’ ಯ ಸಿಕ್ತ್ ಸೆನ್ಸ್ ಅವರನ್ನುಎಚ್ಚರಿಸಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...