alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಬಾಲಿ ಡಾ’ ಎನ್ನಲಿದ್ದಾರೆ ಬಿಗ್ ಬಿ

amitabh kabali

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಫಸ್ಟ್ ಡೇ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಹಿಂದಿಯಲ್ಲೂ ರಿಮೇಕ್ ಆಗಲಿದ್ದು, ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ ಎನ್ನಲಾಗಿದೆ.

ರಜನಿಕಾಂತ್ ಅಭಿನಯದ ಪ.ರಂಜಿತ್ ನಿರ್ದೇಶನ ಮತ್ತು ಕಲೈಪುಲಿ ಎಸ್.ಥನು ನಿರ್ಮಾಣದ ‘ಕಬಾಲಿ’ ಹಿಂದಿಗೆ ಡಬ್ ಆಗಿದ್ದರೂ, ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆದಿಲ್ಲ ಎನ್ನಲಾಗಿದ್ದು,, ಈ ಹಿನ್ನಲೆಯಲ್ಲಿ ಬಾಲಿವುಡ್ ನಲ್ಲಿ ರಿಮೇಕ್ ಮಾಡಲು ಯೋಜಿಸಲಾಗಿದೆ. ಅಮಿತಾಬ್ ಬಚ್ಚನ್ ಅವರು ರಜನಿಕಾಂತ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ವಯೋ ಸಹಜ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡು ಕಮಾಲ್ ಮಾಡಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ಇದನ್ನು ಹಿಂದಿಗೆ ರಿಮೇಕ್ ಮಾಡಲಿದ್ದು, ಅಮಿತಾಬ್ ಬಚ್ಚನ್ ಅವರು ‘ಕಬಾಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ನಿರ್ಮಾಣವಾಗಿ ಯಶಸ್ವಿಯಾದ ‘ಸಿಂಗಂ’, ‘ಗಜಿನಿ’, ಮೊದಲಾದ ಸಿನಿಮಾಗಳು ಬಾಲಿವುಡ್ ನಲ್ಲೂ ಸಕ್ಸಸ್ ಕಂಡಿವೆ. ಇದೀಗ ‘ಕಬಾಲಿ’ ರೀಮೇಕ್ ಮಾಡಲು ಯೋಜಿಸಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...