alex Certify
ಕನ್ನಡ ದುನಿಯಾ       Mobile App
       

Kannada Duniya

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾದ ‘ಬಿಗ್ ಬಿ’

ಬಾಲಿವುಡ್‌ನ ಐಕಾನ್ ನಟ ಅಮಿತಾಭ್ ಬಚ್ಚನ್ ಇದೀಗ ಸಮಾಜ ಸೇವೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದು, ರೈತರ ಸಾಲ ಮರು ಪಾವತಿಸಲು ಮುಂದಾಗಿದ್ದಾರೆ.

ಉತ್ತರಪ್ರದೇಶದ 850 ರೈತರ ಸಾಲ ಪಾವತಿಸಲು ಮುಂದಾಗಿರುವ ಅಮಿತಾಭ್ ಈ ಬಗ್ಗೆ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು, ಉತ್ತರ ಪ್ರದೇಶದ ಸುಮಾರು 850 ರೈತರ ಸಾಲವನ್ನು ತೀರಿಸಲು ಸಿದ್ಧನಿದ್ದೇನೆ. ಈ ಬಗ್ಗೆ ಸರಕಾರದಿಂದ ಮಾಹಿತಿ ಕೇಳಿದ್ದೇನೆ. ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಯಾವ ರೀತಿ ಇದನ್ನು ಮಾಡಬೇಕೆಂದು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರಕಾರ ಗುರುತಿಸಿರುವ 850 ರೈತರ ಸಾಲದ ಮೊತ್ತ 5.5 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲ ರೈತರ ಸಾಲ ಮರುಪಾವತಿ ಕಷ್ಟ. ಆದ್ದರಿಂದ ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಭಾರತದ ಗಡಿಯಲ್ಲಿ ಮಡಿದ ಸುಮಾರು 44 ಸೈನಿಕ ಕುಟುಂಬಗಳಿಗೆ ಧನಸಹಾಯ ಮಾಡಿದ್ದರು. ಇದರೊಂದಿಗೆ ವೇಶ್ಯಾವಾಟಿಕೆ ವಿರುದ್ಧ ಹೋರಾಡುತ್ತಿರುವ ಅಜಿತ್ ಸಿಂಗ್ ಅವರಿಗೆ ಧನ ಸಹಾಯ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...