alex Certify
ಕನ್ನಡ ದುನಿಯಾ       Mobile App
       

Kannada Duniya

75 ನೇ ವಯಸ್ಸಿನಲ್ಲಿ `ಬ್ರಹ್ಮಾಸ್ತ್ರ’ಕ್ಕಾಗಿ ರಾತ್ರಿ ಮೂರರವರೆಗೆ ಕೆಲಸ ಮಾಡ್ತಾರೆ ಬಿಗ್ ಬಿ

ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಯುತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. 75 ವರ್ಷದ ಬಹುತೇಕರು ಆರಾಂ ಖುರ್ಚಿಯಲ್ಲಿ ಆರಾಮಾಗಿ ಕುಳಿತು ಕಾಲ ಕಳೆಯುತ್ತಿದ್ದರೆ ಅಮಿತಾಬ್ ಬಚ್ಚನ್ ಮಾತ್ರ ರಾತ್ರಿ 3 ಗಂಟೆಯವರೆಗೂ ಶೂಟಿಂಗ್ ಮಾಡ್ತಿದ್ದಾರೆ.

ಇಷ್ಟು ವಯಸ್ಸಾದ್ರೂ ಯುವ ನಾಯಕರನ್ನು ನಾಚಿಸುಂತೆ ಕೆಲಸ ಮಾಡುವ ಅಮಿತಾಬ್ ಎಲ್ಲರ ಮನ ಗೆದ್ದಿದ್ದಾರೆ. ಅಮಿತಾಬ್ ತಮ್ಮ ಕೆಲಸದ ಬಗ್ಗೆ ಅಧಿಕೃತ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಮಳೆ ಹಾಗೂ ಮಣ್ಣಿನ ಮಧ್ಯೆ ಶೂಟಿಂಗ್ ಮಾಡಲು ಹೋಗ್ತಿದ್ದೇನೆ. ಮಧ್ಯರಾತ್ರಿ ಮೂರು ಗಂಟೆಯವರೆಗೆ ಕೆಲಸ ಮಾಡ್ತೇನೆ. ಕೆಲಸ ತುಂಬಾ ಚೆನ್ನಾಗಿದೆ. ಹಾಗೆ ಹೆಚ್ಚು ಕಾಳಜಿ ವಹಿಸಲಾಗ್ತಿದೆ. ಬ್ರಹ್ಮಾಸ್ತ್ರ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಯುತ್ತಿದೆ ಎಂದು ಅಮಿತಾಬ್ ಟ್ವಿಟ್ ಮಾಡಿದ್ದಾರೆ.

ಅಮಿತಾಬ್ ತಡರಾತ್ರಿಯವರೆಗೆ ಕೆಲಸ ಮಾಡಿರೋದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಮಿತಾಬ್ ಅನೇಕ ಚಿತ್ರಗಳಿಗೆ ತಡರಾತ್ರಿಯವರೆಗೆ ಕೆಲಸ ಮಾಡಿದ್ದಾರೆ. ಕೋಟ್ಯಾಧಿಪತಿ ಶೂಟಿಂಗ್ ವೇಳೆ ಕೂಡ ಅಮಿತಾಬ್ ವಾರಗಳ ಕಾಲ ನಿದ್ರೆ ಮಾಡಿರಲಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...