alex Certify
ಕನ್ನಡ ದುನಿಯಾ       Mobile App
       

Kannada Duniya

ಕುಟುಂಬಸ್ಥರ ಸುಂದರ ಫೋಟೋ ಶೇರ್ ಮಾಡಿದ ಬಿಗ್ ಬಿ

ಬಾಲಿವುಡ್ ನ ಗೋಲ್ಡನ್ ಪ್ಯಾಮಿಲಿ ಎಂದೇ ಅಮಿತಾಬ್ ಬಚ್ಚನ್ ಕುಟುಂಬವನ್ನು ಕರೆಯಲಾಗುತ್ತದೆ. ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಪತ್ನಿ ಜಯಾ ಹಾಗೂ ಮಕ್ಕಳಿಬ್ಬರ ಸಂಸಾರ ಅನ್ಯೋನ್ಯವಾಗಿದೆ. ಎಂಗ್ರಿ ಯಂಗ್ ಮೆನ್ ಎಂದೇ ಹೆಸರಾಗಿರುವ ಬಚ್ಚನ್ ವಯಸ್ಸಾದಂತೆ ಮತ್ತಷ್ಟು ಸುಂದರವಾಗಿ ಕಾಣ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್ ಬಚ್ಚನ್ ಸಕ್ರಿಯವಾಗಿದ್ದಾರೆ. ಟ್ವೀಟರ್ ನಲ್ಲಿ ಸದಾ ಆ್ಯಕ್ಟಿವ್ ಆಗಿರುವ ಅಮಿತಾಬ್ ತಮ್ಮ ಕುಟುಂಬಸ್ಥರ ಫೋಟೋಗಳನ್ನು ಹಾಕಿ ಅದಕ್ಕೆ ಕಮೆಂಟ್ ಮಾಡ್ತಿರ್ತಾರೆ. ಭಾನುವಾರ ಕುಟುಂಬಸ್ಥರ ಸುಂದರ ಫೋಟೋಗಳನ್ನು ಟ್ವಿಟ್ ಮಾಡಿದ್ದಾರೆ.

ಅಮಿತಾಬ್ ಕುಟುಂಬ ಭಾನುವಾರ ಮದುವೆಯೊಂದರಲ್ಲಿ ಪಾಲ್ಗೊಂಡಿತ್ತು. ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆರಾದ್ಯ ಬಚ್ಚನ್, ಶ್ವೇತಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ಗೆ ಹಾಕಿರುವ ಅಮಿತಾಬ್ ಅಭಿಮಾನಿಗಳ ಕಣ್ಣಿಗೆ ತಂಪೆರೆದಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬಚ್ಚನ್ ಮತ್ತಷ್ಟು ಸುಂದರವಾಗಿ ಕಾಣ್ತಿದ್ದು, ಯುವ ನಟರನ್ನು ನಾಚಿಸುವಂತೆ ಮಿಂಚುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...